ಸೇತುಸಮುದ್ರಂ ಯೋಜನೆಯ ಪರಾಮರ್ಶೆಗೆ ರಚಿತವಾದ ತಜ್ಞರ ಸಮಿತಿಯನ್ನು ಪುನಾರಚನೆ ಮಾಡಬೇಕೆಂದು ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯ ಸ್ವಾಮಿ ಅವರ ಕೋರಿಕೆಯನ್ನು ಸ್ವೀಕರಿಸಲು ಸುಪ್ರೀಂಕೋರ್ಟ್ ಬುಧವಾರ ನಿರಾಕರಿಸಿದೆ.
ಪ್ರಸಕ್ತ ಸಮಿತಿಯನ್ನು ರದ್ದುಮಾಡುವಂತೆ ಕೋರಿದ ಅರ್ಜಿಯ ಬಗ್ಗೆ ಸ್ವಾಮಿ ಪ್ರಸ್ತಾಪಿಸಿದಾಗ, ನಾವು ಸಮಿತಿಯ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಅದನ್ನು ಕೋರ್ಟ್ ನೇಮಕ ಮಾಡಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ನೇತೃತ್ವದ ಪೀಠ ತಿಳಿಸಿದೆ.
ಆದಾಗ್ಯೂ, ಸ್ವಾಮಿ ಅವರಿಗೆ ಅಗತ್ಯ ದಾಖಲಾತಿಗಳನ್ನು ನೀಡುವುದಾಗಿ ಹೆಚ್ಚುವರಿ ಸಾಲಿಸಿಟರಿ ಜನರಲ್ ಕೋರ್ಟ್‌ಗೆ ಆಶ್ವಾಸನೆ ನೀಡಿದರು. ಸಮಿತಿಯ ಸದಸ್ಯರು ಪಕ್ಷಪಾತದ ನಿಲುವನ್ನು ಹೊಂದಿದ್ದಾರೆ ಎಂದು ಸ್ವಾಮಿ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.
|