ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಜೀವಂತದಹನ:11 ಆರೋಪಿಗಳಿಗೆ ಜೀವಾವಧಿ
1992ರಲ್ಲಿ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಬಳಿಕ ಸಂಭವಿಸಿದ ಹಿಂಸಾಚಾರದಲ್ಲಿ 11 ಜನರನ್ನು ಜೀವಸಹಿತ ದಹಿಸಿದ ಎಲ್ಲ 15 ಮಂದಿ ಆರೋಪಿಗಳಿಗೆ ಕಾನ್ಪುರ ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

ಆದರೆ ತೀರ್ಪು ನೀಡುತ್ತಿದ್ದಂತೆ ಕೋರ್ಟ್ ಸಂಕೀರ್ಣದಲ್ಲಿ ಹಾಜರಿದ್ದ ವಕೀಲರು ದಾಂಧಲೆ ನಡೆಸಿ ಉಪಸ್ಥಿತರಿದ್ದ ನ್ಯಾಯಾಧೀಶರ ಮೇಲೆ ದಾಳಿ ಮಾಡಿದರು. ಆರೋಪಿಗಳಲ್ಲಿ ಒಬ್ಬರಾದ ಪುಷ್ಪೇಂದ್ರ ಯಾದವ್ ಕೂಡ ವಕೀಲರಾಗಿದ್ದು ಅವರ ಕೈಗೆ ಕೋಳ ಹಾಕುವ ಪೊಲೀಸರ ನಿರ್ಧಾರವು ಅವರಲ್ಲಿ ಆಕ್ರೋಶ ಉಂಟುಮಾಡಿತು.

ನಿರ್ದಿಷ್ಟ ಕೋಮಿಗೆ ಸೇರಿದ 11 ಜನರನ್ನು 1992ರ ಡಿ.10ರಂದು ಕಾನ್ಪುರದ ಗೋವಿಂದನಗರ ಪ್ರದೇಶದಲ್ಲಿ ಗುಂಪೊಂದು ಜೀವಸಹಿತ ದಹನ ಮಾಡಿತ್ತು. ಸತ್ತವರಲ್ಲಿ ಒಬ್ಬ ಮಹಿಳೆ ಮತ್ತು ಮಗು ಸಹ ಸೇರಿದ್ದಾರೆ. ಹತ್ಯೆ ಮತ್ತು ಬೆಂಕಿಹಚ್ಚುವಿಕೆ ಸೇರಿದಂತೆ ವಿವಿಧ ಅಪರಾಧಗಳಿಗೆ 25 ಜನರ ಮೇಲೆ ಆರೋಪ ಹೊರಿಸಲಾಗಿತ್ತು.
ಮತ್ತಷ್ಟು
ಬೃಹತ್ ಪೂರ್ಣಚಂದ್ರ ಗುರುವಾರ ಗೋಚರ
ರಂಗಭೂಮಿ ಸಂಪನ್ಮೂಲ ವಿಕೇಂದ್ರಿಕರಣವಾಗಲಿ: ಕವತ್ತಾರ್
ತಜ್ಞರ ಸಮಿತಿ ಪುನಾರಚನೆಗೆ ಕೋರ್ಟ್ ನಕಾರ
ರಥಿಗೆ ಮರಣದಂಡನೆಗೆ ಸಿಬಿಐ ಕೋರಿಕೆ
ಕೊಯಮತ್ತೂರು ಸ್ಫೋಟ: ಭಾಷಾಗೆ ಜೀವಾವಧಿ
ಮಾಜಿ ಸಚಿವ ಅಮರಮಣಿ ದಂಪತಿಗಳಿಗೆ ಜೀವಾವಧಿ ಶಿಕ್ಷೆ