ಮುಂಬರುವ ಗುಜರಾತ್ ವಿಧಾನ ಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ವಿರೋಧ ಪಕ್ಷಗಳಿಗಿಂತ ತಮ್ಮದೇ ಪರಿವಾರದ ವಿರೋಧ ಎದುರಿಸಬೇಕಾಗಿದೆ.
ಮೋದಿಯ ವಿರುದ್ದ ವಿಶ್ವ ಹಿಂದೂ ಪರಿಷತ್ ವಿರೋಧ ವ್ಯಕ್ತಪಡಿಸಿದ ನಂತರದ ಸರದಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪರಿವಾರದ್ದಾಗಿದೆ.
ಮೋದಿ ಅವರ ಕಾರ್ಯವೈಖರಿಯಿಂದ ನಾವು ಸಂತುಷ್ಟರಾಗಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರಕಟಿಸಿದೆ.
ಡಿಸೆಂಬರ್‌ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಗುಜರಾತ್ ಬಿಜೆಪಿಯಲ್ಲಿನ ಯಾವುದೇ ಬಣಗಳಿಗೆ ಬೆಂಬಲಿಸದಿರಲು ನಿರ್ಧರಿಸಿದೆ.
ಸಂಘದ ವಕ್ತಾರರು ಪ್ರಕಟಣೆಯೊಂದನ್ನು ಜಾರಿಗೊಳಿಸಿ ಪಕ್ಷದೊಳಗಿನ ಭಿನ್ನಮತ ಇಬ್ಬರು ಹರೆಯದ ಮಕ್ಕಳು ಹಿರಿಯರೊಂದಿಗೆ ಕಲಹಕ್ಕೆ ನಾಂದಿಹಾಡುತ್ತಿರುವುದರಿಂದ ನಾವು ತಟಸ್ಥರಾಗಿರುತ್ತೇವೆ ಎಂದು ಹೇಳಿದ್ದಾರೆ.
ಮೋದಿ ಅವರು ತಮ್ಮ ರಾಜಕೀಯ ಏಳಿಗೆಗಾಗಿ ಹಿಂದೂ ಸಂಘಟನೆಗಳಲ್ಲಿ ಬಿರುಕು ಮೂಡಿಸುತ್ತಿದ್ದಾರೆ ಎಂದು ಸಾಧುಗಳು ಮತ್ತು ಸಂತರು ಹೇಳಿಕೆ ನೀಡಿದ ಬೆನ್ನಲ್ಲೆ ಆರ್‌ಎಸ್‌ಎಸ್ ಪ್ರಕಟಣೆ ಹೊರಬಿದ್ದಿದೆ.
|