ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ವಿವಾಹ ನೋಂದಣಿ ಕಡ್ಡಾಯಕ್ಕೆ ಆದೇಶ
ವಿವಾಹ ನೋಂದಣಿಯನ್ನು ಮೂರು ತಿಂಗಳಲ್ಲಿ ಕಡ್ಡಾಯ ಮಾಡಲು ಸೂಕ್ತ ಶಾಸನವನ್ನು ತರುವಂತೆ ಸುಪ್ರೀಂಕೋರ್ಟ್ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ನೀಡಿದೆ. ಮೂರು ತಿಂಗಳ ಗಡುವಿನ ಬಳಿಕ ಪ್ರಮಾಣಪತ್ರದ ಜತೆ ಅನುಸರಣೆ ವರದಿಯನ್ನು ಕಳಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೀಠ ತಿಳಿಸಿದೆ.

ಹಲವಾರು ರಾಜ್ಯಗಳು ಹಿಂದು ಸಮುದಾಯದ ಜನರಿಗೆ ಮಾತ್ರ ವಿವಾಹ ನೋಂದಣಿ ಕಡ್ಡಾಯ ಮಾಡಿರುವುದನ್ನು ಗಮನಿಸಿದ ಸುಪ್ರೀಂಕೋರ್ಟ್ ಮೇಲಿನ ಆದೇಶ ನೀಡಿದೆ. ಈ ಆದೇಶದಿಂದ ವಿವಾಹ ನೋಂದಣಿ ಎಲ್ಲ ಧರ್ಮದವರಿಗೂ ಕಡ್ಡಾಯವಾಗಲಿದೆ
.
ಅನೇಕ ಮಂದಿ ಪತಿಯಿಂದ ತ್ಯಜಿಸಲ್ಪಟ್ಟ ಮಹಿಳೆಯರು ತಮ್ಮ ನಿರ್ವಹಣೆ ಮತ್ತು ಮಕ್ಕಳನ್ನು ಸುಪರ್ದಿಗೆ ತೆಗೆದುಕೊಳ್ಳುವ ಹಕ್ಕಿನ ಬಗ್ಗೆ ಹೋರಾಡುವ ಸಂಕಷ್ಟವನ್ನು ಗಮನಿಸಿದ ಕೋರ್ಟ್ ಈ ಕ್ರಮವನ್ನು ಕೈಗೊಂಡಿದೆ.

ಈ ಆದೇಶವನ್ನು ನ್ಯಾಯಾಂಗ ಕ್ರಿಯಾಶೀಲತೆಯ ಪ್ರದರ್ಶನ ಹಾಗೂ ಸಮಾನ ನಾಗರಿಕ ಸಂಹಿತೆ ಜಾರಿ ಮಾಡಬೇಕೆಂಬ ಆಂದೋಳನಕ್ಕೆ ಪುಷ್ಠಿ ನೀಡುತ್ತದೆ ಎಂದು ಅನೇಕ ಮಂದಿ ಭಾವಿಸಿದ್ದಾರೆ.

ಮತ್ತಷ್ಟು
ಮೋದಿ ವಿರುದ್ದ ಕಠಿಣ ನಿಲುವು ತಳೆದ ಆರ್‌ಎಸ್‌ಎಸ್
ಜೀವಂತದಹನ:11 ಆರೋಪಿಗಳಿಗೆ ಜೀವಾವಧಿ
ಬೃಹತ್ ಪೂರ್ಣಚಂದ್ರ ಗುರುವಾರ ಗೋಚರ
ರಂಗಭೂಮಿ ಸಂಪನ್ಮೂಲ ವಿಕೇಂದ್ರಿಕರಣವಾಗಲಿ: ಕವತ್ತಾರ್
ತಜ್ಞರ ಸಮಿತಿ ಪುನಾರಚನೆಗೆ ಕೋರ್ಟ್ ನಕಾರ
ರಥಿಗೆ ಮರಣದಂಡನೆಗೆ ಸಿಬಿಐ ಕೋರಿಕೆ