ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಜಯಾಗೆ ರಕ್ಷಣೆ:ಪ್ರಮಾಣಪತ್ರಕ್ಕೆ ಆದೇಶ
PTI
ಮಾಜಿ ಮುಖ್ಯಮಂತ್ರಿ ಜೆ. ಜಯಲಿಲಿತಾ ಅವರಿಗೆ ಜಡ್ ಪ್ಲಸ್ ಶ್ರೇಣಿಯ ಅಡಿಯಲ್ಲಿ ನೀಡಿರುವ ರಕ್ಷಣೆ ಬಗ್ಗೆ ವಿವರಗಳುಳ್ಳ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಮದ್ರಾಸ್ ಹೈಕೋರ್ಟ್ ಬುಧವಾರ ತಮಿಳುನಾಡು ಸರ್ಕಾರಕ್ಕೆ ಆದೇಶಿಸಿದೆ. ಜಯಲಲಿತಾ ಅವರು ಸಲ್ಲಿಸಿದ್ದ ಅರ್ಜಿಯ ಆಧಾರದ ಮೇಲೆ ನ್ಯಾಯಮೂರ್ತಿ ಸುಗುಣ ಮೇಲಿನ ಆದೇಶ ನೀಡಿದ್ದಾರೆ.

ಜಡ್ ಪ್ಲಸ್ ಶ್ರೇಣಿಯ ಪೂರ್ಣ ಭದ್ರತೆಯನ್ನು ಒದಗಿಸುವಂತೆ ರಾಜ್ಯಸರ್ಕಾರಕ್ಕೆ ಆದೇಶಿಸಬೇಕೆಂದು ಜಯಲಿಲಿತಾ ಅರ್ಜಿಯಲ್ಲಿ ಕೋರಿದ್ದರು. ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಅ.26ಕ್ಕೆ ಮುಂದೂಡಿದರು.

ಅರ್ಜಿಯನ್ನು ನ್ಯಾಯಾಧೀಶರು ವಿಚಾರಣೆಗೆ ಎತ್ತಿಕೊಂಡಾಗ. ಜಯಲಲಿತಾ ಅವರ ವಕೀಲರಾದ ಎನ್. ಜ್ಯೋತಿ ಮಾಜಿ ಮುಖ್ಯಮಂತ್ರಿ ಅವರಿಗೆ 1991ರಿಂದೀಚೆಗೆ ಜಡ್ ಪ್ಲಸ್ ಭದ್ರತೆ ನೀಡಲಾಗಿದೆ ಎಂದು ಹೇಳಿದರು. ಜಯಲಿಲತಾ ಅವರು ಸಂಚಾರದಲ್ಲಿದ್ದಾಗ ಕೇಂದ್ರಸರ್ಕಾರ ಎನ್‌ಎಸ್‌ಜಿ ಕಮಾಂಡೊಗಳ ರಕ್ಷಣೆ ನೀಡುತ್ತದೆ.

ಅವರು ನಿವಾಸದಲ್ಲಿದ್ದಾಗ ರಾಜ್ಯಸರ್ಕಾರ ರಕ್ಷಣೆ ನೀಡಬೇಕು. ಆದರೆ ಕೇಂದ್ರ ಸರ್ಕಾರ ಎನ್‌ಎಸ್‌ಜಿ ರಕ್ಷಣೆ ನೀಡುತ್ತಿದ್ದರೂ ಕೂಡ ರಾಜ್ಯ ಸರ್ಕಾರ 2006 ಮೇ 13ರಿಂದ ರಕ್ಷಣೆಯನ್ನು ಹಿಂತೆಗೆದುಕೊಂಡಿದೆ.

ಮಾಜಿ ಮುಖ್ಯಮಂತ್ರಿಗೆ ಭದ್ರತೆ ಒದಗಿಸುವುದು ರಾಜ್ಯಸರ್ಕಾರದ ಸಾಂವಿಧಾನಿಕ ಕರ್ತವ್ಯ. ಆದರೆ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ತಮ್ಮ ಕರ್ತವ್ಯಚ್ಯುತಿ ತೋರಿಸಿದ್ದಾರಎಂದು ಜ್ಯೋತಿ ಹೇಳಿದರು.

ಜಯಾ ಅವರ ಭದ್ರತಾ ಕಾರ್ಯಕ್ಕೆ 155 ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ ಎಂದು ಮುಖ್ಯಮಂತ್ರಿ ಒಂದು ಬಾರಿ ಹೇಳಿದರೆ ಇನ್ನೊಮ್ಮೆ 55 ಸಿಬ್ಬಂದಿಯನ್ನು ನಿಯೋಜಿಸಿರುವುದಾಗಿ ಹೇಳುತ್ತಾರೆಂದು ಜ್ಯೋತಿ ತಿಳಿಸಿದರು.
ಮತ್ತಷ್ಟು
ವಿವಾಹ ನೋಂದಣಿ ಕಡ್ಡಾಯಕ್ಕೆ ಆದೇಶ
ಮೋದಿ ವಿರುದ್ದ ಕಠಿಣ ನಿಲುವು ತಳೆದ ಆರ್‌ಎಸ್‌ಎಸ್
ಜೀವಂತದಹನ:11 ಆರೋಪಿಗಳಿಗೆ ಜೀವಾವಧಿ
ಬೃಹತ್ ಪೂರ್ಣಚಂದ್ರ ಗುರುವಾರ ಗೋಚರ
ರಂಗಭೂಮಿ ಸಂಪನ್ಮೂಲ ವಿಕೇಂದ್ರಿಕರಣವಾಗಲಿ: ಕವತ್ತಾರ್
ತಜ್ಞರ ಸಮಿತಿ ಪುನಾರಚನೆಗೆ ಕೋರ್ಟ್ ನಕಾರ