ಶಶ್ತ್ರಾಸ್ತ್ರ ಕಾಯ್ದೆಯಡಿ ವಿಶೇಷ ಟಾಡಾ ಕೋರ್ಟ್ ತಮಗೆ ಶಿಕ್ಷೆ ವಿಧಿಸಿರುವುದರ ವಿರುದ್ಧ ಬಾಲಿವುಡ್ ನಟ ಸಂಜಯ್ ದತ್ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಅ.23ರಂದು ಸಂಜಯ್ ದತ್ ತೀರ್ಪಿನ ಪ್ರತಿಯನ್ನು ಸ್ವೀಕರಿಸಿದ ಕೂಡಲೇ ಅವರನ್ನು ಪುಣೆಯ ಯರವಾಡ ಜೈಲಿಗೆ ಹಾಕಲಾಗಿದೆ.
ಈಗ ಅವರು ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಭಯೋತ್ಪಾದನೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಎಕೆ-56 ಬಂದೂಕನ್ನು ಸ್ವಾಧೀನದಲ್ಲಿಟ್ಟುಕೊಂಡಿದ್ದಕ್ಕಾಗಿ ನ.28ರಂದು ಶಿಕ್ಷೆ ವಿಧಿಸಲಾಗಿತ್ತು, ಆದರೆ ಟಾಡಾ ಕಾಯ್ದೆಯಡಿ ಆರೋಪದಿಂದ ಮುಕ್ತರಾಗಿದ್ದ ಸಂಜಯ್‌ಗೆ ತೀರ್ಪಿನ ಪ್ರತಿ ನೀಡಿದ ಬಳಿಕ ಟಾಡಾ ಕೋರ್ಟ್‌ಗೆ ಶರಣಾಗಿದ್ದರು.
ಕೋರ್ಟ್ ಆದೇಶಗಳನ್ನು ನಿಷ್ಠೆಯಿಂದ ಪಾಲಿಸುವ ಮೂಲಕ ಕಾನೂನಿಗೆ ಅತೀವ ಗೌರವವನ್ನು ಸಂಜಯ್ ತೋರಿಸಿದ್ದಾರೆ ಎಂದು ಅವರ ವಕೀಲರು ತಿಳಿಸಿದರು. ಸಂಜಯ್ ಅವರನ್ನು ಮುಂಬೈನಿಂದ ಪುಣೆಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ರಸ್ತೆಮಾರ್ಗವಾಗಿ ಕರೆತರಲಾಯಿತು.
ಕಳೆದ ಬಾರಿ ಒಳ್ಳೆಯ ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಬೇಕೆಂಬ ಅವರ ಅರ್ಜಿ ವಜಾ ಆಗಿದ್ದರಿಂದ ಆಘಾತಕ್ಕೊಳಗಾದಂತೆ ಕಂಡುಬಂದಿದ್ದ ಅವರು ಈ ಬಾರಿ ಜೈಲಿಗೆ ಹೋಗುವ ಸಮಯದಲ್ಲಿ ಶಾಂತಿಚಿತ್ತರಾಗಿದ್ದರು.
|