ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಇನ್ನೂ 9 ಮಂದಿಗೆ ಜೀವಾವಧಿ ಶಿಕ್ಷೆ
ಬಿಜೆಪಿ ನಾಯಕ ಎಲ್.ಕೆ. ಆಡ್ವಾಣಿ ಅವರು 1998 ಫೆ.14ರಂದು ಕೊಯಮತ್ತೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸರಣಿ ಸ್ಫೋಟಗಳನ್ನು ನಡೆಸಲು ಪಿತೂರಿ ಮಾಡಿದ ಇನ್ನೂ 9 ಜನ ಆರೋಪಿಗಳಿಗೆ ಗುರುವಾರ ವಿಶೇಷ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಸ್ಫೋಟದಲ್ಲಿ 58 ಜನರು ಬಲಿಯಾಗಿದ್ದರು.

ಎರಡನೆ ದಿನ ಶಿಕ್ಷೆಯನ್ನು ಪ್ರಕಟಿಸಿದ ನ್ಯಾಯಾಧೀಶ ಕೆ. ಉಥಿರಾಪತಿ 6 ಅಪರಾಧಿಗಳಿಗೆ ಎರಡು ಅವಧಿಯ ಜೀವಾವಧಿ ಶಿಕ್ಷೆ ಮತ್ತು ಮೂವರು ವ್ಯಕ್ತಿಗಳಿಗೆ ಒಂದು ಬಾರಿ ಜೀವಾವಧಿ ಶಿಕ್ಷೆ ಮತ್ತು ಇನ್ನಿತರ ಆರೋಪಗಳಿಗೆ 10ರಿಂದ 40 ವರ್ಷಗಳ ಅವಧಿಯ ಶಿಕ್ಷೆಯನ್ನು ವಿಧಿಸಿದರು.

13 ಅಪರಾಧಿಗಳಿಗೆ ಒಳಸಂಚಿನ ಆರೋಪಗಳಿಗೆ ತಲಾ 13 ವರ್ಷಗಳ ಶಿಕ್ಷೆ ಮತ್ತು ಇನ್ನಿತರ ಆರೋಪಗಳಿಗೆ 7ರಿಂದ 21 ವರ್ಷಗಳ ಶಿಕ್ಷೆ ವಿಧಿಸಿದರು. ಎಲ್ಲ ಶಿಕ್ಷೆಗಳು ಒಟ್ಟೊಟ್ಟಿಗೆ ಜಾರಿಯಾಗುತ್ತದೆ. 22 ಅಪರಾಧಿಗಳು ಕಳೆದ 10 ವರ್ಷಗಳಿಂದ ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿರುವುದರಿಂದ ಉಳಿದ ಅವಧಿಯನ್ನು ಜೈಲಿನಲ್ಲಿ ಕಳೆಯುತ್ತಾರೆ.
ಮತ್ತಷ್ಟು
ಸಚ್ಚಿ ರಾಮಾಯಣ ನಿಷೇಧಕ್ಕೆ ಒತ್ತಾಯ
ಸುಪ್ರೀಂಕೋರ್ಟ್‌ಗೆ ಸಂಜಯ್ ಮೇಲ್ಮನವಿ
ಜಯಾಗೆ ರಕ್ಷಣೆ:ಪ್ರಮಾಣಪತ್ರಕ್ಕೆ ಆದೇಶ
ವಿವಾಹ ನೋಂದಣಿ ಕಡ್ಡಾಯಕ್ಕೆ ಆದೇಶ
ಮೋದಿ ವಿರುದ್ದ ಕಠಿಣ ನಿಲುವು ತಳೆದ ಆರ್‌ಎಸ್‌ಎಸ್
ಜೀವಂತದಹನ:11 ಆರೋಪಿಗಳಿಗೆ ಜೀವಾವಧಿ