ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಅಣು ಒಪ್ಪಂದಕ್ಕೆ ಸಂಬಂಧಪಟ್ಟಂತೆ ಸಂಸತ್ತಿನ ಅಭಿಪ್ರಾಯವನ್ನು ಗಮನಿಸಬೇಕು ಎಂದು ಎಡಪಕ್ಷಗಳು ಕಾಂಗ್ರೆಸ್‌ನ್ನು ಕೇಳಿಕೊಂಡಿದ್ದು ಒಪ್ಪಂದ ಕುರಿತು ತೃತೀಯ ರಂಗದ ನಿಲುವನ್ನು ಸಮರ್ಥಿಸಿರುವ ಸಿಪಿಐ ಮಹಾ ಪ್ರಧಾನ ಕಾರ್ಯದರ್ಶಿ ಎ.ಬಿ ಬರ್ಧನ್ ಅವರು ತೃತೀಯ ರಂಗದ ಅದ್ಯಕ್ಷ ಮುಲಾಯಂ ಸಿಂಗ್ ಅವರೊಂದಿಗೆ ಚರ್ಚಿಸಿದ ನಂತರ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನೆತೃತ್ವದ ಯುಪಿಎ ಸರಕಾರಕ್ಕೆ ಹೊರಗಿನಿಂದ ಬೆಂಬಲ ನೀಡುತ್ತಿರು ಎಡಪಕ್ಷಗಳು ಸಂಯುಕ್ತ ರಾಷ್ಟ್ರೀಯ ಪ್ರಗತಿ ರಂಗವನ್ನು ಸೇರುವುದಕ್ಕೆ ನಿರ್ಧರಿಸಿ ಯುಪಿಎ ಸರಕಾರದ ವಿರುದ್ಧ ಅಣು ಒಪ್ಪಂದ ಮತ್ತು ರೈತರ ಆತ್ಮಹತ್ಯೆ ವಿಷಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿ ಕಾಂಗ್ರೆಸ್ ಆಡಳಿತ ವೈಖರಿಯನ್ನು ಸಂಸತ್ತಿನಲ್ಲಿ ಟೀಕಿಸುವ ಸಾಧ್ಯತೆ ಇದೆ.
ಸಂಸತ್ತಿನ ಪ್ರಮುಖ ವಿರೋಧ ಪಕ್ಷ ಭಾರತೀಯ ಜನತಾಪಕ್ಷವು ಅಣು ಒಪ್ಪಂದದ ಜಾರಿಗೆ ಸಂಬಂಧಿಸಿದಂತೆ ಇರುವ ಅಡ್ಡಿಗಳನ್ನು ನಿವಾರಿಸುವ ನಿಟ್ಟಿನಲ್ಲಿ ಜಂಟಿ ಸದನ ಸಮಿತಿಯ ರಚನೆಗೆ ಒತ್ತಾಯಿಸಿದೆ, ಆದರೆ ಎಡ ಮತ್ತು ತೃತೀಯ ರಂಗಗಳ ಪಕ್ಷಗಳು ಒಪ್ಪಂದವನ್ನು ಪೂರ್ಣ ಪ್ರಮಾಣದಲ್ಲಿ ತಿರಸ್ಕರಿಸುವಂತೆ ಸರಕಾರವನ್ನು ಆಗ್ರಹಿಸಲಿವೆ ಎಂದು ಬರ್ಧನ್ ಮಾಹಿತಿ ನೀಡಿದ್ದಾರೆ.
ಯುನೈಟೆಡ್ ಲಾಯರ್ಸ್ ಅಸೋಸಿಯೆಷನ್ ಆಯೋಜಿಸಿದ್ದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎದುರಾಗುತ್ತಿರುವ ಅಡ್ಡಿಗಳು ಮತ್ತು ಮಾನವ ಹಕ್ಕುಗಳು ಕುರಿತು ಜರುಗಿದ ವಿಚಾರ ಸಂಕೀರ್ಣದಲ್ಲಿ ಮಾತನಾಡುತ್ತಿದ್ದರು. ಭಾರತೀಯ ಜನತಾ ಪಕ್ಷ ತನ್ನ ಧೋರಣೆಯನ್ನು ಸ್ಪಷ್ಟಪಡಿಸಿದೆ. ಅಣು ಒಪ್ಪಂದದ ಕುರಿತಂತೆ ಎಡಪಕ್ಷಗಳು ಸರಕಾರದಿಂದ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ಬೇಕೆ ? ಎಂಬ ಪ್ರಶ್ನೆಗೆ ಎಡ ಮತ್ತು ತೃತೀಯ ರಂಗಗಳು ಒಪ್ಪಂದವನ್ನು ರದ್ದುಗೊಳಿಸಿ ಎನ್ನುತ್ತಿವೆ ಎಂದು ಅವರು ಹೇಳಿದರು.
ತೃತೀಯ ಮತ್ತು ಎಡಪಕ್ಷಗಳ ನಡುವೆ ನವ್ಹಂಬರ್ 16ರಂದು ಸಭೆ ನಡೆಯಲಿದ್ದು ಆದರೆ ಅಷ್ಟರೊಳಗೆ ಸಂಸತ್ತಿನ ಕಲಾಪ ಪ್ರಾರಂಭವಾಗುತ್ತದೆ ಎಂದು ಹೇಳಿ ತಮ್ಮ ಪಕ್ಷವು ವಿಶೇಷ ಆರ್ಥಿಕ ವಲಯಗಳ ಸ್ಥಾಪನೆ ವಿರೋಧ ವ್ಯಕ್ತಪಡಿಸುತ್ತದೆ ಎಂದಿದ್ದಾರೆ.
|