ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಯೋಜನಗಳ ಶೀಘ್ರ ಅನುಷ್ಠಾನಕ್ಕೆ ಪ್ರಧಾನಿ ಕರೆ
PTI
ಯುಪಿಎ ಆಡಳಿತದ ಮುಖ್ಯ ಯೋಜನಗಳನ್ನು ಮುಂದಿನ 6 ತಿಂಗಳಲ್ಲಿ ಶೀಘ್ರವಾಗಿ ಅನುಷ್ಠಾನಕ್ಕೆ ತರುವ ಕಾರ್ಯತಂತ್ರಕ್ಕೆ ಅಂತಿಮ ರೂಪ ನೀಡಿ ಅಭಿವೃದ್ಧಿಯನ್ನು ಸರಿಯಾದ ದಿಕ್ಕಿನಲ್ಲಿ ತರಲು ಪ್ರಧಾನಮಂತ್ರಿ ಮನಮೋಹನ ಸಿಂಗ್ ಶುಕ್ರವಾರ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ.

ಸರ್ಕಾರಿ ಯೋಜನೆಗಳ ಪ್ರಗತಿ ಕುಂಠಿತವಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಮಂತ್ರಿ ಈ ಕ್ರಮಕ್ಕೆ ಮುಂದಾಗಿದ್ದಾರೆ. ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯ ಮತ್ತಿತರರು ಭಾಗವಹಿಸುವ ಈ ಸಭೆಯಲ್ಲಿ 6 ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಸುದೀರ್ಘ ಚರ್ಚೆ ನಡೆಸಲಾಗುವುದು.

ಕೃಷಿ, ಸಾಮಾಜಿಕ ಕ್ಷೇತ್ರಗಳು(ಆರೋಗ್ಯ, ಪಡಿತರ ಮತ್ತು ಶಿಕ್ಷಣ), ಮೂಲಸೌಲಭ್ಯ, ಆಡಳಿತ ಮತ್ತು ಅಲ್ಪಸಂಖ್ಯಾತ ವಿಷಯಗಳು ಇವುಗಳಲ್ಲಿ ಸೇರಿವೆ.ಪ್ರಕಟಿತ ಯೋಜನೆಗಳು ಮತ್ತು ನೀತಿಗಳ ಅನುಷ್ಠಾನಕ್ಕಿರುವ ತೊಡಕುಗಳ ಬಗ್ಗೆ ಸಭೆಯಲ್ಲಿ ಗಮನನೀಡಲಾಗುವುದು. ಮುಂದಿನ 6 ತಿಂಗಳಲ್ಲಿ ಅದಿರು ನೀತಿಗೆ ಅಂತಿಮ ರೂಪ ನೀಡುವುದು,

ಚಿಲ್ಲರೆ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ ಬಗ್ಗೆ ಅಭಿಪ್ರಾಯ, ವಿದ್ಯುತ್ ಬಳಕೆಗಳ ದಕ್ಷತೆ ಸುಧಾರಣೆಗೆ ವೇಗವರ್ಧಿತ ವಿದ್ಯುತ್ ಅಭಿವೃದ್ಧಿ ಮತ್ತು ಸುಧಾರಣೆ ಕಾರ್ಯಕ್ರಮದ ಪುನಾರಚನೆ ಮುಂತಾದ ಆರ್ಥಿಕ ಕಾರ್ಯಕ್ರಮಗಳು ಸೇರಿವೆ.

ಸಾಮಾಜಿಕ ಕ್ಷೇತ್ರ ಕಾರ್ಯಕ್ರಮದಲ್ಲಿ ಆಮ್ ಆದ್ಮಿ ಬೀಮಾ ಯೋಜನಾ ಮತ್ತು ಕಾರ್ಮಿಕ ವರ್ಗಕ್ಕೆ ವೃದ್ಧಾಪ್ಯ ಪಿಂಚಣಿ ಜತೆಗೆ ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ ಮತ್ತು ಪಡಿತರ ವ್ಯವಸ್ಥೆ ಬಲಪಡಿಸುವುದು ಕೂಡ ಸೇರಿದೆ.
ಮತ್ತಷ್ಟು
ಸಂಸತ್ತಿನ ಅಭಿಪ್ರಾಯಕ್ಕೆ ತಲೆಬಾಗಿ
ಗಡುವು ವಿಧಿಸುವುದು ಅವಮಾನ:ಯೆಚೂರಿ
ಇನ್ನೂ 9 ಮಂದಿಗೆ ಜೀವಾವಧಿ ಶಿಕ್ಷೆ
ಸಚ್ಚಿ ರಾಮಾಯಣ ನಿಷೇಧಕ್ಕೆ ಒತ್ತಾಯ
ಸುಪ್ರೀಂಕೋರ್ಟ್‌ಗೆ ಸಂಜಯ್ ಮೇಲ್ಮನವಿ
ಜಯಾಗೆ ರಕ್ಷಣೆ:ಪ್ರಮಾಣಪತ್ರಕ್ಕೆ ಆದೇಶ