ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸಿಬಿಐ ತನಿಖೆಗೆ ಮಾಯಾವತಿ ಆಗ್ರಹ
PTI
ಗುಜರಾತ್‌ನಲ್ಲಿ 2002ರಲ್ಲಿ ಸಂಭವಿಸಿದ ಕೋಮುಗಲಭೆಗಳ ಬಗ್ಗೆ ಹೊಸದಾಗಿ ಸಿಬಿಐ ತನಿಖೆಗೆ ಆದೇಶಿಸಬೇಕೆಂದು ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಸುದ್ದಿಚಾನೆಲ್‌ಗಳಲ್ಲಿ ಮತ್ತು ಮಾಧ್ಯಮದ ವರದಿಗಳಲ್ಲಿ ತೋರಿಸಿದ ಕುಟುಕು ಕಾರ್ಯಾಚರಣೆ ಬಳಿಕ ಗುಜರಾತ್ ಗಲಭೆ ಬಗ್ಗೆ ಹಲವು ಸತ್ಯಾಂಶಗಳು ಬೆಳಕಿಗೆ ಬಂದಿವೆ ಎಂದು ಹೇಳಿದ ಅವರು ಸಿಬಿಐ ತನಿಖೆ ಅಗತ್ಯ ಕಂಡುಬಂದಿದೆ ಎಂದು ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ಮಾಯಾವತಿ ತಿಳಿಸಿದ್ದಾರೆ.

ಬಿಜೆಪಿ ಮತ್ತು ಅದರ ಅಂಗಪಕ್ಷಗಳು ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಿಟ್ಟುಕೊಂಡು ಹತ್ಯಾಕಾಂಡದಲ್ಲಿ ನಿರತವಾಯಿತು. ಇಂತಹ ಹೇಯ ಕೃತ್ಯದಲ್ಲಿ ಭಾಗಿಯಾಗಿರುವ ಕೋಮುವಾದಿ ಶಕ್ತಿಗಳನ್ನು ಬೆಳಕಿಗೆ ತರಲು ಸಿಬಿಐ ತನಿಖೆಗೆ ತಾವು ಒತ್ತಾಯಿಸುವುದಾಗಿ ಬಿಎಸ್‌ಪಿ ಮುಖ್ಯಸ್ಥೆ ಹೇಳಿದರು.

ಗೋಧ್ರಾ ರೈಲು ದುರಂತದ ಬಳಿಕ ಸಂಭವಿಸಿದ ಗಲಭೆ ಆಕ್ರೋಶದ ಅಭಿವ್ಯಕ್ತಿಯಲ್ಲ, ಬದಲಿಗೆ ಹತ್ಯಾಕಾಂಡ. ಮುಖ್ಯಮಂತ್ರಿ ನರೇಂದ್ರ ಮೋದಿ ಹುಕುಂ ಮೇಲೆ ಸಂಘಪರಿವಾರದ ಉನ್ನತ ಸ್ತರದ ಕಾರ್ಯಕರ್ತರು ಯೋಜಿಸಿ ಕಾರ್ಯರೂಪಕ್ಕೆ ತಂದಿರುವುದಕ್ಕೆ ತಮ್ಮ ಬಳಿ ಸಾಕ್ಷ್ಯಾಧಾರವಿದೆ ಎಂದು ತೆಹಲ್ಕಾ ವಾರಪತ್ರಿಕೆ ಗುರುವಾರ ತಿಳಿಸಿತ್ತು.

ಇಂತಹ ಅಮಾನುಷ ಘಟನೆಗಳು ಭವಿಷ್ಯತ್ತಿನಲ್ಲಿ ಮರುಕಳಿಸದಿರಲು ತನಿಖೆ ಅವಶ್ಯಕ ಎಂದು ಮಾಯಾವತಿ ನುಡಿದರು. ಗುಜರಾತ್ ಗಲಭೆ ದುಷ್ಕರ್ಮಿಗಳಿಗೆ ಶಿಕ್ಷೆ ವಿಧಿಸಿದಾಗಲೇ ಅಲ್ಪಸಂಖ್ಯಾತರು ಮತ್ತಿತರರಲ್ಲಿ ಭದ್ರತೆಯ ಭಾವನೆ ಉಂಟಾಗುತ್ತದೆ ಎಂದು ಮಾಯಾವತಿ ತಿಳಿಸಿದರು.
ಮತ್ತಷ್ಟು
ಮೋದಿ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ
ಜಮ್ಮುಕಾಶ್ಮಿರದಲ್ಲಿ ಹಿಂಸಾಚಾರ ಇಳಿಮುಖ-ಸಿಆರ್‌ಪಿಎಫ್
ಮೋದಿ, ಅಡ್ವಾಣಿ ಬಂಧನಕ್ಕೆ ಲಾಲೂ ಆಗ್ರಹ
ಯೋಜನಗಳ ಶೀಘ್ರ ಅನುಷ್ಠಾನಕ್ಕೆ ಪ್ರಧಾನಿ ಕರೆ
ಸಂಸತ್ತಿನ ಅಭಿಪ್ರಾಯಕ್ಕೆ ತಲೆಬಾಗಿ
ಗಡುವು ವಿಧಿಸುವುದು ಅವಮಾನ:ಯೆಚೂರಿ