ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮುಖ್ಯಮಂತ್ರಿ ಪದವಿಗೆರಲು ಮೋದಿಗೆ ಹಕ್ಕಿಲ್ಲ: ಕಾಂಗೈ
ಇಡೀ ರಾಷ್ಟ್ರವನ್ನೇ ತಲ್ಲಣಗೊಳಿಸಿದ್ದ ಗುಜರಾತ್‌ನ ಗೋಧ್ರಾ ಹತ್ಯಾಕಾಂಡದಲ್ಲಿ ಆಡಳಿತಾರೂಢ ಸರಕಾರದ ಷಡ್ಯಂತ್ರವಿದೆ ಎಂದು ಬಲವಾಗಿ ಆರೋಪಿಸಿರುವ ಕಾಂಗ್ರೆಸ್ ರಾಷ್ಟ್ರೀಯ ನಾಯಕರು, ನರೇಂದ್ರ ಮೋದಿ ಮತ್ತೆ ಮುಖ್ಯಮಂತ್ರಿಯಾಗಿ ಮುಂದುವರೆಯುವ ನೈತಿಕ ಹಕ್ಕಿಲ್ಲ ಎಂದು ಆರೋಪಿಸಿದ್ದಾರೆ.

"ಗೋಧ್ರಾ ಹತ್ಯಾಕಾಂಡಕ್ಕೆ ಬಾಹ್ಯ ಬೆಂಬಲ ನೀಡಿದ್ದು, ಪ್ರಮುಖ ಖಾಸಗಿವಾಹಿನಿಯೊಂದರ ತನಿಖೆಯಿಂದ ಧೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ, ಮೋದಿ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಲು ನೈತಿಕ ಮತ್ತು ಸಾಂವಿಧಾನಿಕ ಹಕ್ಕನ್ನು ಕಳೆದುಕೊಂಡಿದ್ದು, ತತಕ್ಷಣವೇ ಕೆಳಗಿಳಿಯಬೇಕು" ಎಂದು ಕಾಂಗ್ರೆಸ್ ವಕ್ತಾರ ಜಯಂತಿ ನಟರಾಜನ್ ಮೋದಿಯವರನ್ನು ಆಗ್ರಹಿಸಿದ್ದಾರೆ.

ಮೋದಿಯವರಿಗೆ ಸಂವಿಧಾನದ ಮೇಲೆ ಗೌರವವಿದ್ದರೆ ಮತ್ತು ಮಾನವ ಹಕ್ಕುಗಳ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದರೆ, ಅವರು ತಕ್ಷಣಕ್ಕೆ ತಮ್ಮ ಸ್ಥಾನದಿಂದ ಕೆಳಗಿಳಿಯುವುದು ಸೂಕ್ತ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದೇ ವೇಳೆ, ಬಿಜೆಪಿ ರಾಷ್ಟ್ರೀಯ ನಾಯಕರ ಮೇಲೆ ಹರಿಹಾಯ್ದ ಜಯಂತಿ, ಈ ಘಟನೆಯನ್ನು ಖಂಡಿಸಲು ಯಾವೋಬ್ಬ ಬಾಜಪ ನಾಯಕರು ಮುಂದೆ ಬರುತ್ತಿಲ್ಲ ಎಂದು ಆರೋಪಿಸಿದರು.
ಮತ್ತಷ್ಟು
ಸಿಬಿಐ ತನಿಖೆಗೆ ಮಾಯಾವತಿ ಆಗ್ರಹ
ಮೋದಿ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ
ಜಮ್ಮುಕಾಶ್ಮಿರದಲ್ಲಿ ಹಿಂಸಾಚಾರ ಇಳಿಮುಖ-ಸಿಆರ್‌ಪಿಎಫ್
ಮೋದಿ, ಅಡ್ವಾಣಿ ಬಂಧನಕ್ಕೆ ಲಾಲೂ ಆಗ್ರಹ
ಯೋಜನಗಳ ಶೀಘ್ರ ಅನುಷ್ಠಾನಕ್ಕೆ ಪ್ರಧಾನಿ ಕರೆ
ಸಂಸತ್ತಿನ ಅಭಿಪ್ರಾಯಕ್ಕೆ ತಲೆಬಾಗಿ