ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ನಕ್ಸಲ್ ದಾಳಿ: ಮಾಜಿ ಸಿಎಂ ಪುತ್ರ ಬಲಿ
ಜಾರ್ಖಂಡ್‌ನ ಗಿರಿಧಿಯಾ ಜಿಲ್ಲೆಯಲ್ಲಿ ಶನಿವಾರ ಮಧ್ಯರಾತ್ರಿ ಸಮಯದಲ್ಲಿ ನಕ್ಸಲೀಯರು ನಡೆಸಿದ ದಾಳಿಗೆ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ಅವರ ಪುತ್ರ ಸೇರಿದಂತೆ 17ಮಂದಿ ಬಲಿಯಾಗಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಗಿರಿಧಿಯಾ ಜಿಲ್ಲೆಯ ಚಿಲ್‌ಕಾಡಿಯಾ ಗ್ರಾಮದಲ್ಲಿ ಬುಡಕಟ್ಟು ಜನಾಂಗದವರು ಹಬ್ಬದ ಸಂಭ್ರಮಾಚರಣೆಯಲ್ಲಿರುವ ಸಂದರ್ಭದಲ್ಲಿ ರಾತ್ರಿ 1ಗಂಟೆ ಸುಮಾರಿಗೆ ಸಾಮಾನ್ಯರಂತೆ ಆಗಮಿಸಿದ್ದ ನಕ್ಸಲೀಯರ ತಂಡ ಏಕಾಏಕಿ ದಾಳಿ ನಡೆಸಿದ ಪರಿಣಾಮ ಮರಾಂಡಿ ಅವರ ಪುತ್ರ ಅನೂಪ್ ಸೇರಿದಂತೆ 17ಮಂದಿ ಸಾವನ್ನಪ್ಪಿದ್ದಾರೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮರ್ ಸಿಂಗ್ ತಿಳಿಸಿದ್ದಾರೆ.

ಗುಂಡು ಹಾಗೂ ಬಾಂಬ್‌ಗಳ ಮೂಲಕ ಗ್ರಾಮಸ್ಥರ ಮೇಲೆ ದಾಳಿ ನಡೆಸಿದಾಗ,ಅಲ್ಲಿಯೇ ಹಾಜರಿದ್ದ ಮಾಜಿ ಮುಖ್ಯಮಂತ್ರಿ ಮರಾಂಡಿ ಅವರ ಪುತ್ರ ಬಲಿಯಾಗಿದ್ದಾರೆ.ಅಲ್ಲದೇ ದಾಳಿಯಲ್ಲಿ ನಾಲ್ಕು ಮಂದಿ ಗಾಯಗೊಂಡಿದ್ದಾರೆ.

ಬಾಬುಲಾಲ್ ಮರಾಂಡಿ ಅವರು ಜಾರ್ಖಂಡ್‌ನ ಕೊಡಾರ್ಮಾ ಲೋಕಸಭಾ ಸದಸ್ಯರಾಗಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ಮುಖ್ಯಮಂತ್ರಿ ಪದವಿಗೆರಲು ಮೋದಿಗೆ ಹಕ್ಕಿಲ್ಲ: ಕಾಂಗೈ
ಸಿಬಿಐ ತನಿಖೆಗೆ ಮಾಯಾವತಿ ಆಗ್ರಹ
ಮೋದಿ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ
ಜಮ್ಮುಕಾಶ್ಮಿರದಲ್ಲಿ ಹಿಂಸಾಚಾರ ಇಳಿಮುಖ-ಸಿಆರ್‌ಪಿಎಫ್
ಮೋದಿ, ಅಡ್ವಾಣಿ ಬಂಧನಕ್ಕೆ ಲಾಲೂ ಆಗ್ರಹ
ಯೋಜನಗಳ ಶೀಘ್ರ ಅನುಷ್ಠಾನಕ್ಕೆ ಪ್ರಧಾನಿ ಕರೆ