ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ತಂದೆಯ ಸಮಾಧಿಗೆ ಭುಟ್ಟೊ ಗೌರವ
PTI
ಮಾಜಿ ಪ್ರಧಾನಮಂತ್ರಿ ಬೇನಜೀರ್ ಭುಟ್ಟೊ ಅವರು ಶನಿವಾರ ತಮ್ಮ ತಂದೆ ಜುಲ್ಫಿಕರ್ ಅಲಿ ಭುಟ್ಟೊ ಅವರ ಸಮಾಧಿಗೆ ಗೌರವ ಸಲ್ಲಿಸಲು ಪೂರ್ವಿಕರ ಗ್ರಾಮಕ್ಕೆ ಭೇಟಿ ನೀಡಿದರು. ಸುಕ್ಕೂರ್ ವಿಮಾನನಿಲ್ದಾಣದಿಂದ 60 ಮೈಲುಗಳ ಪ್ರಯಾಣ ಮಾಡಿ ಗಾರಿ ಖುದಾ ಭಕ್ಷ್ ಗ್ರಾಮಕ್ಕೆ ಆಗಮಿಸಿದ ಅವರ ವಾಹನದ ಬಳಿ ನೂರಾರು ಬೆಂಬಲಿಗರು ನೆರೆದು ಭುಟ್ಟೊ ದರ್ಶನ ಪಡೆದರು.

ಶಸ್ತ್ರಸಜ್ಜಿತ ಖಾಸಗಿ ಅಂಗರಕ್ಷಕರು ಬಿಳಿಯ ಅಮೃತಶಿಲೆಯ ಸಮಾಧಿಯನ್ನು ಸುತ್ತುವರಿದು, ಪೊಲೀಸರಿಗೂ ಸಹ ಪ್ರವೇಶವನ್ನು ನಿರಾಕರಿಸಿದರು. ಅಭಿಮಾನಿಗಳಿಗೆ ಕೈಬೀಸಿದ ಭುಟ್ಟೊ ವಾಹನದಿಂದ ಇಳಿಯುವಾಗ ಅರೆಮಿಲಿಟರಿ ಪಡೆಗಳು ಬಿಳಿಯ ಪಿಕ್ ಅಪ್‌‌ ವಾಹನಗಳ ಮೇಲೆ ಮೆಷಿನ್ ಗನ್‌ಗಳೊಂದಿಗೆ ಸಜ್ಜಾಗಿದ್ದರು.

ಭುಟ್ಟೊ ತಮ್ಮ ತಂದೆಯ ಸಮಾಧಿಗೆ ಪ್ರಾರ್ಥಿಸಿ ಅದರ ಮೇಲೆ ಹೂವಿನ ದಳಗಳನ್ನು ಅರ್ಪಿಸಿ ಗೌರವ ಸಲ್ಲಿಸಿದರು. ಸುಮಾರು 2,000 ಬೆಂಬಲಿಗರು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಕೆಂಪು, ಹಸಿರು ಮತ್ತು ಕಪ್ಪು ಧ್ವಜಗಳನ್ನು ಬೀಸುತ್ತಾ ಭುಟ್ಟೊಗಾಗಿ ಕಾದಿದ್ದರು.

ಕರಾಚಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಬಳಿಕ ಭುಟ್ಟೊ ತಮ್ಮ ನಿವಾಸದಲ್ಲಿ ಬಾಗಿಲು ಮುಚ್ಚಿಕೊಂಡೇ ಬಹುತೇಕ ದಿನಗಳನ್ನು ಕಳೆದಿದ್ದರು.
ಮತ್ತಷ್ಟು
ಮುಂಬೈನಲ್ಲಿ ಹೊಂಚುಹಾಕುವ ಬಾಂಬರ್‌ಗಳು
ನಕ್ಸಲ್ ದಾಳಿ: ಮಾಜಿ ಸಿಎಂ ಪುತ್ರ ಬಲಿ
ಮುಖ್ಯಮಂತ್ರಿ ಪದವಿಗೆರಲು ಮೋದಿಗೆ ಹಕ್ಕಿಲ್ಲ: ಕಾಂಗೈ
ಸಿಬಿಐ ತನಿಖೆಗೆ ಮಾಯಾವತಿ ಆಗ್ರಹ
ಮೋದಿ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ
ಜಮ್ಮುಕಾಶ್ಮಿರದಲ್ಲಿ ಹಿಂಸಾಚಾರ ಇಳಿಮುಖ-ಸಿಆರ್‌ಪಿಎಫ್