ಕೋರ್ಟ್‌ನಲ್ಲಿ ವಿಚಾರಣೆ ನಡೆಯುವಾಗ ಬೆನ್ನು ತಿರುಗಿಸುವುದು ನ್ಯಾಯಾಲಯ ನಿಂದನೆ ಆಗುತ್ತದೆಯೇ? ಪ್ರಾರ್ಥನೆ ಸಲ್ಲಿಸುವುದಕ್ಕಾಗಿ ಕೋರ್ಟ್‌ಗೆ ಬೆನ್ನು ತಿರುಗಿಸಿದರೆ ಅದು ನ್ಯಾಯಾಲಯ ನಿಂದನೆ ಎನಿಸುವುದಿಲ್ಲ.
1998ರ ಸರಣಿ ಬಾಂಬ್ ಸ್ಫೋಟ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ವಿಶೇಷ ಕೋರ್ಟ್‌ನಲ್ಲಿ ನ್ಯಾಯಾಲಯ ನಿಂದನೆ ಎನಿಸುವ ಬೆನ್ನು ತಿರುಗಿಸಿದ ಘಟನೆಯನ್ನು ಹಗುರವಾಗಿ ತೆಗೆದುಕೊಂಡ ನ್ಯಾಯಾಧೀಶರು, ಆರೋಪಿ ಪ್ರಾರ್ಥನೆ ಸಲ್ಲಿಸುವ ಸಲುವಾಗಿ ಬೆನ್ನುತಿರುಗಿಸಿದ್ದರಿಂದ ಅದು ನ್ಯಾಯಾಲಯ ನಿಂದನೆ ಎನಿಸುವುದಿಲ್ಲ ಎಂದು ಹೇಳಿದ್ದಾರೆ.
ಆರೋಪಿ ಯಾಕೂಬ್‌ಗೆ ನ್ಯಾಯಾಧೀಶ ಉಥಿರಾಪತಿ ಪಿತೂರಿಗಾಗಿ 10 ವರ್ಷಗಳ ಸೆರೆವಾಸ ಮತ್ತು ಇನ್ನೂ ಮೂರು ಆರೋಪಗಳಿಗಾಗಿ 17 ವರ್ಷಗಳ ಸೆರೆವಾಸ ವಿಧಿಸಿದ ಬಳಿಕ ಜೈಲಿನಿಂದ ಬಿಡುಗಡೆಯಾಗುವುದು ಖಚಿತವಾದ ಯಾಕೂಬ್ ಬೆನ್ನು ತಿರುಗಿಸಿ ನಮಾಜ್ ಮಾಡಿದರು.
ಕೋರ್ಟ್‌ಗೆ ಬೆನ್ನು ತಿರುಗಿಸುವುದು ನ್ಯಾಯಾಲಯ ನಿಂದನೆ ಆಗುತ್ತದೆ ಎಂದು ನ್ಯಾಯಾಧೀಶರು ಹೇಳಿದರು. ಬಳಿಕ ಆರೋಪಿಯು ಒಳ್ಳೆಯ ಮನಸ್ಸಿನಿಂದ ಪ್ರಾರ್ಥನೆ ಸಲ್ಲಿಕೆಗೆ ಬೆನ್ನು ತಿರುಗಿಸಿದ್ದೆಂದು ತಿಳಿದಾಗ ಕೋರ್ಟ್ ಅದನ್ನು ಹಗುರವಾಗಿ ತೆಗೆದುಕೊಂಡಿತು.
|