ಕವಯಿತ್ರಿ ಮಧುಮಿತ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಉತ್ತರಪ್ರದೇಶದ ಮಾಜಿ ಸಚಿವ ಅಮರ್‌ಮಣಿ ತ್ರಿಪಾಠಿ ಹಾಗೂ ಪತ್ನಿ ಮಾಧುಮಾನಿ ಮತ್ತು ಮತ್ತಿಬ್ಬರು ಆರೋಪಿತರನ್ನು ಹರಿದ್ವಾರ್ ಜೈಲಿಗೆ ವರ್ಗಾಯಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕವಯಿತ್ರಿ ಮಧುಮಿತ ಕೊಲೆ ಪ್ರಕರಣದಲ್ಲಿ ಆರೋಪಿತರಾದ ಅಮರ್‌ಮಣಿ ,ಮಾಧುಮಾನಿ ಹಾಗೂ ಸಹಚರರಾದ ಸಂತೋಷ್ ರಾಯ್,ರೋಹಿತ್ ಚತುರ್ವೇದಿಯನ್ನು ರೋಷನ್‌ಬಾದ್ ಜೈಲಿನಿಂದ ಬಿಗಿ ಬಂದೋಬಸ್ತ್‌ನಲ್ಲಿ ಹರಿದ್ವಾರ್ ಜೈಲಿಗೆ ಸ್ಥಳಾಂತರಿಸಲಾಗಿದೆ.
ಅಮರ್‌ಮಣಿ ಬಿಳಿ ಕುರ್ತಾ ಪೈಜಾಮ ಹಾಗೂ ಪತ್ನಿ ಮಾಧುಮಾನಿ ಅವರು ಬಿಳಿ ಸೀರೆ,ವೇಲ್‌ನಿಂದ ಇದ್ದು ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ.
ಆದರೆ ಸಾಮಾನ್ಯ ಖೈದಿಗಳಿಂತೆ ಅವರನ್ನು ನೋಡಿಕೊಳ್ಳುತ್ತಿಲ್ಲ.ಅಮರ್‌ಮಣಿ ಅವರಿಗೆ ದಿನಪತ್ರಿಕೆ ಮತ್ತು ದೂರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಜೈಲಿನ ಅಧಿಕಾರಿಗಳು ವಿವರಿಸಿದ್ದಾರೆ.
ಆರೋಪಿತರನ್ನು ಜೈಲಿಗೆ ಕರೆತರುತ್ತಿರುವ ಸಂದರ್ಭದಲ್ಲಿ ಸುದ್ದಿ ಸಂಗ್ರಹಿಸಲು ತೆರಳಿದ್ದ ಮಾಧ್ಯಮದವರಿಗೆ ಪೊಲೀಸ್ ಅಧಿಕಾರಿಗಳು ಅವರ ಭೇಟಿಗೆ ಅವಕಾಶ ಕಲ್ಪಿಸಲು ನಿರಾಕರಿಸಿದರು.ಬಳಿಕ ಮಾಧ್ಯಮ ಪ್ರತಿನಿಧಿಗಳು ಪೊಲೀಸ್ ಮತ್ತು ಆಡಳಿತಾಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
2003ರ ಮೇ 9ರಂದು ಲಕ್ನೋದಲ್ಲಿನ ಪ್ಲ್ಯಾಟ್‌ನಲ್ಲಿ ಕವಿ ಮಧುಮಿತ ಶುಕ್ಲಾ ಅವರನ್ನು ಗುಂಡು ಹೊಡೆದು ಕೊಲೆ ಮಾಡಲಾಗಿತ್ತು. ಇದರಲ್ಲಿ ಅಮರ್ ಮಣಿ ಪತ್ನಿ ಮಧುಮಣಿಯೇ ಪ್ರಮುಖ ಪಾತ್ರ ವಹಿಸಿದ್ದಳು.ತನ್ನ ಗಂಡನೊಂದಿಗೆ ಅನೈತಿಕ ಸಂಬಂಧ ಇದೆ ಎಂಬ ಕಾರಣಕ್ಕಾಗಿ ಆಕೆಯ ಕೊಲೆ ಮಾಡಲಾಗಿತ್ತು.
ಶುಕ್ಲಾ ಸಹೋದರಿ ನಿಧಿ ಹಾಗೂ ಆಕೆಯ ಮನೆ ಸಹಾಯಕ ದೇಸ್‌ರಾಜ್ ಪ್ರಮುಖ ಸಾಕ್ಷಿಯಾಗಿದ್ದರು.ತನ್ನ ಅಕ್ಕನ ಕೊಲೆಗೆ ಕಾರಣಕರ್ತರಾದ ಅಮರ್ ಮಣಿ ಮತ್ತು ಮಧುಮಣಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಬೇಡಿಕೆ ಸಲ್ಲಿಸಿದ್ದರು. ಸಿಬಿಐ ಈ ಕೊಲೆ ಪ್ರಕರಣದ ತನಿಖೆ ನಡೆಸಿತ್ತು.ಸುಮಾರು 79ಮಂದಿ ಸಾಕ್ಷಿ ನುಡಿದಿದ್ದರು.
|