ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಜಂಟಿಯಾಗಿ ಚುನಾವಣೆ ಎದುರಿಸಲಿರುವ ಕಾಂಗ್ರೆಸ್, ಎನ್‌ಸಿಪಿ
ಗುಜರಾತಿನಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ಅಸೆಂಬ್ಲಿ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಎನ್‌ಸಿಪಿ ಜಂಟಿಯಾಗಿ ಎದುರಿಸುವುದಾಗಿ ಭಾನುವಾರ ನಿರ್ಧರಿಸಿವೆ.

ಮೈತ್ರಿ ಮತ್ತು ಸೀಟು ಹಂಚಿಕೆ ವ್ಯವಸ್ಥೆಯ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ಎರಡೂ ಪಕ್ಷಗಳ ನಾಯಕರು ಅಹ್ಮದಾಬಾದ್‍‌ನಲ್ಲಿ ಸಭೆ ಸೇರಿದ್ದರು.

ಹೊಂದಾಣಿಕೆಯು ಅಂತಿಮಗೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಎನ್‌ಸಿಪಿ ಅಧ್ಯಕ್ಷ ಚಬ್ಲೀಜಾಸ್ ಮೆಹ್ತಾ ಸಭೆ ಮುಕ್ತಾಯಗೊಂಡ ಬಳಿಕ ಹೇಳಿದರು.

ರಾಜ್ಯ ಕಾಂಗ್ರೆಸ್ ಮೇಲ್ವಿಚಾರಕ ಬಿ.ಕೆ.ಹರಿಪ್ರಸಾದ್, ಗುಜರಾತ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಭರತ್‌ಸಿನ್ ಸೋಲಂಕಿ ಮತ್ತು ಅಸೆಂಬ್ಲಿ ವಿರೋಧ ಪಕ್ಷದ ನಾಯಕ ಅರ್ಜುನ್ ಮೊದ್ವೀದಿಯಾ ಈ ಸಭೆಯಲ್ಲಿ ಭಾಗವಹಿಸಿದ್ದರು.
ಮತ್ತಷ್ಟು
ನಾಳೆ ಪ್ರವೀಣ್ ಹೇಳಿಕೆ ದಾಖಲು
ಹರಿದ್ವಾರ್ ಜೈಲು ಕಂಬಿಯ ಹಿಂದೆ ತ್ರಿಪಾಠಿ
ನಂದಿಗ್ರಾಮ ಬಾಂಬ್ ಸ್ಫೋಟಕ್ಕೆ 3 ಬಲಿ
ಪ್ರಾರ್ಥನೆಗೆ ಬೆನ್ನುತಿರುಗಿಸುವುದು ನಿಂದನೆಯಲ್ಲ
ಎನ್‌ಡಿಎ ಆಡಳಿತದ ವಿರುದ್ಧ ಲಾಲು ರಾಲಿ
ನಾಲ್ವರು ಪಾಕ್ ಯೋಧರ ಮುಂಡ ಪತ್ತೆ