ತಮ್ಮ ಹಿರಿಯ ಸೋದರ ಮತ್ತು ಬಿಜೆಪಿ ಪ್ರಧಾನಕಾರ್ಯದರ್ಶಿ ಪ್ರಮೋದ್ ಮಹಾಜನ್ ಅವರನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಪ್ರವೀಣ್ ಮಹಾಜನ್ ತಾವು ಸೋದರನ ಮೇಲೆ ಗುಂಡು ಹಾರಿಸಿಲ್ಲ ಎಂದು ಹೇಳಿದ್ದಾರೆ.
ಮುಂಬೈ ಸೆಷನ್ಸ್ ಕೋರ್ಟ್ ಅವರ ವಿರುದ್ಧ ಸಾಕ್ಷ್ಯಗಳನ್ನು ದಾಖಲು ಮಾಡಲು ಆರಂಭಿಸುತ್ತಿದ್ದಂತೆ ಪ್ರವೀಣ್ ಇಡೀ ಘಟನೆಯನ್ನು ತಮ್ಮದೇ ಧಾಟಿಯಲ್ಲಿ ಕೋರ್ಟ್ ಮುಂದೆ ಹೇಳಿದರು. ಆದರೆ ಹತರಾದ ಪ್ರಮೋದ್ ಪತ್ನಿ ರೇಖಾ ಮಹಾಜನ್ ಆರೋಪಿಯನ್ನು ಗುರುತಿಸಿದ್ದಾರೆಂದು ಹೇಳಿದಾಗ ರೇಖಾ ಹೇಳಿಕೆ ಸುಳ್ಳು ಎಂದು ಪ್ರವೀಣ್ ನುಡಿದರು,
ಇದಕ್ಕೆ ಮುಂಚೆ ಕಳೆದ ಏಪ್ರಿಲ್‌ನಲ್ಲಿ ಪೊಲೀಸರ ಎದುರು ಶರಣಾಗಿದ್ದ ಪ್ರವೀಣ್ ಪ್ರಮೋದ್ ಮೇಲೆ ತಾವು ಮೂರು ಗುಂಡುಗಳನ್ನು ಹಾರಿಸಿದ್ದಾಗಿ ಒಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದರು.
ಆದರೀಗ ತಾವು ಗುಂಡುಹಾರಿಸಿಲ್ಲ ಎಂದು ತಿರುವು ಮುರುವು ಹೇಳಿಕೆ ನೀಡುವ ಮೂಲಕ ಪ್ರಕರಣ ಕುತೂಹಲದ ಘಟ್ಟವನ್ನು ತಲುಪಿದೆ. ಈ ಪ್ರಕರಣದಲ್ಲಿ 32 ಸಾಕ್ಷಿಗಳ ತನಿಖೆಯನ್ನು ಪ್ರಾಸಿಕ್ಯೂಷನ್ ಮುಗಿಸಿದೆ.
|