ಸನ್ನಿಹಿತವಾಗಿರುವ "ಕುದುರೆ ವ್ಯಾಪಾರ" ತಪ್ಪಿಸಲು ಕರ್ನಾಟಕ ವಿಧಾನಸಭೆಯನ್ನು ವಿಸರ್ಜಿಸಿ ಹೊಸ ಚುನಾವಣೆಗಳನ್ನು ನಡೆಸಬೇಕೆಂದು ಕಾಂಗ್ರೆಸ್ ಸೋಮವಾರ ಕೇಂದ್ರಸರ್ಕಾರಕ್ಕೆ ಒತ್ತಾಯಿಸಿದೆ.
ದೇವೇಗೌಡರೇ ಒಪ್ಪಿಕೊಂಡಿರುವಂತೆ ಕುದುರೆ ವ್ಯಾಪಾರ ತಪ್ಪಿಸಲು ಕೇಂದ್ರ ಸರ್ಕಾರವು ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಗ್ವಿ ವರದಿಗಾರರಿಗೆ ತಿಳಿಸಿದರು. ಚುನಾವಣೆ ತಪ್ಪಿಸಲು ಕುದುರೆ ವ್ಯಾಪಾರಕ್ಕೆ ಅವಕಾಶ ನೀಡುತ್ತಿರುವವರೇ ನಮ್ಮ ಮೇಲೆ ಕುದುರೆ ವ್ಯಾಪಾರದ ದೂರು ಮಾಡುವುದು ವ್ಯಂಗ್ಯವೆನಿಸಿದೆ ಎಂದು ಅವರು ನುಡಿದರು."
ಭಾರತದ ಸಮೃದ್ಧ ರಾಜ್ಯಗಳಲ್ಲಿ ಒಂದಾದ ಕರ್ನಾಟಕಕ್ಕೆ ಅಪವಿತ್ರ ಮೈತ್ರಿಯ ಲಕ್ವ ಹಿಡಿದಿರುವ ಬಗ್ಗೆ ಕಾಂಗ್ರೆಸ್‌ಗೆ ಆತಂಕವಾಗಿದೆ ಎಂದು ಅವರು ಹೇಳಿದರು.ಕೇಂದ್ರ ಸರ್ಕಾರ ಈ ಮೊದಲೇ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂಬ ಪ್ರಶ್ನೆಗೆ ಬೊಮ್ಮಾಯಿ ಮತ್ತು ಬಿಹಾರ ಪ್ರಕರಣಗಳ ತೀರ್ಪಿನ ಮನೋಭಾವಕ್ಕೆ ಈ ಪ್ರಕರಣ ಭಿನ್ನವಾಗಿದ್ದರೂ ವಿಧಾನಸಭೆಯನ್ನು ವಿಸರ್ಜಿಸದೇ ಅದನ್ನು ಅಮಾನತಿನಲ್ಲಿರಿಸಿತು ಎಂದು ಅವರು ಹೇಳಿದರು.
ಕರ್ನಾಟಕದ್ದು ಕುದುರೆ ವ್ಯಾಪಾರ, ದುರಾಡಳಿತ, ರಾಜಕೀಯ ಅವಕಾಶವಾದಿತನ, ಬೂಟಾಟಿಕೆ ಮತ್ತು ಅಪವಿತ್ರ ಮೈತ್ರಿಗಳ ವ್ಯಥೆಯ ಕಥೆಯಾಗಿದೆ ಎಂದು ಸಿಂಘ್ವಿ ಹೇಳಿದರು.
|