ರಾಷ್ಟ್ರೀಯ ಮಟ್ಟದಲ್ಲಿ ಎಡ ಪಕ್ಷವು ತೃತೀಯರಂಗವನ್ನು ರಚಿಸುವ ಸಾಧ್ಯತೆಗಳನ್ನು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕರಾಟ್ ಸೋಮವಾರ ತಳ್ಳಿಹಾಕಿದ್ದಾರೆ.
ತಮಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ತುರ್ತಾಗಿ ತೃತೀಯ ರಂಗವನ್ನು ರಚಿಸುವ ಯಾವುದೇ ಯೋಜನೆಯನ್ನು ನಾವು ಹೊಂದಿಲ್ಲ ಎಂದು ಹೇಳಿದರು.
ದೇಶದಲ್ಲಿನ ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಜೊತೆಗೆ ಭಾರತ ಅಮೆರಿಕ ಪರಮಾಣು ಒಪ್ಪಂದದ ಕುರಿತು ಕರುಣಾನಿಧಿ ಅವರೊಂದಿಗೆ ಚರ್ಚೆ ನಡೆಸಿದರು.
ಪರಮಾಣು ಒಪ್ಪಂದದ ಮೇಲೆ ರಾಜಕೀಯ ಪಕ್ಷಗಳಿಂದ ನಾವು ಏಕತೆಯ ದೃಷ್ಟಿಯನ್ನು ಬಯಸುತ್ತೇವೆ ಅದಕ್ಕಾಗಿಯೆ ನಾವು ಇತ್ತೀಚೆಗೆ ದೆಹಲಿಯಲ್ಲಿ ಯುಎನ್‌ಪಿಎ ನಾಯಕರನ್ನು ಭೇಟಿ ಮಾಡಿದ್ದೆವು ಎಂದು ಕರಾಟ್ ಹೇಳಿದರು.ಅಲ್ಲದೆ ಪರಮಾಣು ಒಪ್ಪಂದದಿಂದ ಯುಪಿಎ ಸರಕಾರಕ್ಕೆ ಯಾವುದೇ ಅಪಾಯವಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದರು.
|