ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಆಕಾಶವಾಣಿ, ದೂರದರ್ಶನ ಸಿಬ್ಬಂದಿ ಸಾಮೂಹಿಕ ರಜೆ
ಪ್ರಸಾರ ಭಾರತಿ ಕಾಯ್ದೆಯನ್ನು ಜಾರಿಗೆ ತರುವಲ್ಲಿ ವಿಳಂಬ ನೀತಿಯನ್ನು ವಿರೋಧಿಸಿ ದೇಶದಾದ್ಯಂತ ಆಕಾಶವಾಣಿ ಮತ್ತು ದೂರದರ್ಶನ ಸಿಬ್ಬಂದಿ ಸಾಮೂಹಿಕ ಸಾಂದರ್ಭಿಕ ರಜೆಯಲ್ಲಿ ತೆರಳಲು ನಿರ್ಧರಿಸಿದ್ದಾರೆ.

1997ರಲ್ಲಿ ಪ್ರ,ಸಾರ ಭಾರತಿ ಕಾಯ್ದೆ ಜಾರಿಗೆ ಬಂದಿದ್ದು,ರಾಜ್ಯಗಳ ಮಾಲೀಕತ್ವದ ಮಾಧ್ಯಮ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಸ್ವಾಯತ್ತತೆ ಅಧಿಕಾರ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವುದರಿಂದ ಆಕಾಶವಾಣಿ ಮತ್ತು ದೂರದರ್ಶನ ಸಿಬ್ಬಂದಿ ಸಾಮೂಹಿಕವಾಗಿ ಸಾಂದರ್ಭಿಕ ರಜೆಯ ಮೇಲೆ ತೆರಳಲು ನಿರ್ಣಯ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಸಂಘದ ವಕ್ತಾರರು ತಿಳಿಸಿದ್ದಾರೆ.

ಪ್ರಸಾರ ಭಾರತಿಯನ್ನು ಜಾರಿಗೆ ತರದೇ ಆಕಾಶವಾಣಿ ಮತ್ತು ದೂರದರ್ಶನ ಸಿಬ್ಬಂದಿಗಳ ಸೇವೆಯನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಟ್ಟಂತಾಗಿದೆ ಎಂದು ಸಂಘವು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಶುಕ್ರವಾರದಿಂದ ದೇಶದ ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿ ಸಿಬ್ಬಂದಿ ಸಾಮೂಹಿಕ ರಜೆಯ ಮೇಲೆ ತೆರಳಲಿದ್ದಾರೆ ಎಂದು ಆಕಾಶವಾಣಿ ಮತ್ತು ದೂರದರ್ಶನದ ಮೂಲಗಳು ತಿಳಿಸಿವೆ.
ಮತ್ತಷ್ಟು
ತೃತೀಯರಂಗ ರಚನೆಯಿಲ್ಲ:ಕರಾಟ್
ವಿಧಾನಸಭೆ ವಿಸರ್ಜನೆಗೆ ಕಾಂಗ್ರೆಸ್ ಒತ್ತಾಯ
ಸೋದರನ ಮೇಲೆ ಗುಂಡು ಹಾರಿಸಿಲ್ಲ: ಪ್ರಮೋದ್
12ನೇ ಸರೋವರ ಸಮಾವೇಶ
ಕರುಣಾನಿಧಿಗೆ ಸುಪ್ರೀಂಕೋರ್ಟ್ ನೋಟೀಸ್
ಇಂದು ರಾಯಭಾರಿ ರೊನೆನ್ ಸೇನ್ ಹಾಜರು