ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಒಪ್ಪಂದದ ಮರುಮಾತುಕತೆ ಇಲ್ಲ: ರೈಸ್
PTI
ಸ್ಥಗಿತಗೊಂಡ ಪರಮಾಣು ಒಪ್ಪಂದಕ್ಕೆ ಅಮೆರಿಕ ಬೆಂಬಲ ವ್ಯಕ್ತಪಡಿಸಿದ್ದು, ಅದನ್ನು ಮುನ್ನಡೆಸಲು ಭಾರತಕ್ಕೆ ಒತ್ತಾಯಿಸಿದೆ. ಆದರೆ ಒಪ್ಪಂದದ ಬಗ್ಗೆ ಮರುಮಾತುಕತೆಯನ್ನು ಅದು ತಳ್ಳಿಹಾಕಿದೆ.

ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಜತೆ ದೂರವಾಣಿ ಸಂಭಾಷಣೆ ಮಾಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಂಡೋಲೀಜಾ ರೈಸ್ ಒಪ್ಪಂದಕ್ಕೆ ಅಮೆರಿಕದ ಬೆಂಬಲವನ್ನು ಪುನರುಚ್ಚರಿಸಿದರು ಎಂದು ವಿದೇಶಾಂಗ ಇಲಾಖೆ ವಕ್ತಾರ ಸೀನ್ ಮೆಕ್‌ಕರ್ಮಾಕ್ ತಿಳಿಸಿದ್ದಾರೆ.

ಚರ್ಚೆಯ ಬಗ್ಗೆ ಯಾವುದೇ ನಿರ್ಣಯ ತೆಗೆದುಕೊಳ್ಳಲಿ, ಭಾರತೀಯ ಜನರು ಮತ್ತು ಭಾರತೀಯ ರಾಜಕೀಯ ವ್ಯವಸ್ಥೆ ಅದನ್ನು ಇತ್ಯರ್ಥ ಮಾಡಬೇಕು ಎಂದು ಭಾರತದಲ್ಲಿ ಪರಮಾಣು ಒಪ್ಪಂದದ ಬಗ್ಗೆ ಎದ್ದಿರುವ ವಾದವನ್ನು ಉಲ್ಲೇಖಿಸಿ ಅವರು ನುಡಿದರು.

ಆದರೆ ಈ ಒಪ್ಪಂದದೊಂದಿಗೆ ಮುಂದಡಿ ಇಡುವಂತೆ ನಾವು ಭಾರತ ಸರ್ಕಾರಕ್ಕೆ ಒತ್ತಾಯಿಸುತ್ತೇವೆ. ನಾವು ಸಹ ಒಪ್ಪಂದದ ಅನುಷ್ಠಾನಕ್ಕೆ ಸಿದ್ಧವಾಗಿದ್ದೇವೆ ಎಂದು ಅವರು ನುಡಿದರು.

ಮುಖರ್ಜಿ ಜತೆ ಸಂಭಾಷಣೆಯಲ್ಲಿ ಒಪ್ಪಂದಕ್ಕೆ ಬೆಂಬಲ ಮುಂದುವರಿಸುವ ಅದೇ ಮಾತನ್ನು ರೈಸ್ ಉಚ್ಚರಿಸಿದ್ದಾರೆ ಎಂದು ಅವರು ಹೇಳಿದರು.ರೈಸ್ ದೂರವಾಣಿ ಕರೆಯಲ್ಲಿ ಇನ್ನಿತರ ವಿಷಯ ಚರ್ಚಿಸಲಾಯಿತೇ ಎಂದು ಪ್ರಶ್ನಿಸಿದಾಗ ಪರಮಾಣು ಒಪ್ಪಂದವು ಸಂಭಾಷಣೆಯ ಮುಖ್ಯ ವಿಷಯವಾಗಿತ್ತು ಎಂದು ಹೇಳಿದರು.
ಮತ್ತಷ್ಟು
ಆಕಾಶವಾಣಿ, ದೂರದರ್ಶನ ಸಿಬ್ಬಂದಿ ಸಾಮೂಹಿಕ ರಜೆ
ತೃತೀಯರಂಗ ರಚನೆಯಿಲ್ಲ:ಕರಾಟ್
ವಿಧಾನಸಭೆ ವಿಸರ್ಜನೆಗೆ ಕಾಂಗ್ರೆಸ್ ಒತ್ತಾಯ
ಸೋದರನ ಮೇಲೆ ಗುಂಡು ಹಾರಿಸಿಲ್ಲ: ಪ್ರಮೋದ್
12ನೇ ಸರೋವರ ಸಮಾವೇಶ
ಕರುಣಾನಿಧಿಗೆ ಸುಪ್ರೀಂಕೋರ್ಟ್ ನೋಟೀಸ್