ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಪ್ರವಾಹದಲ್ಲಿ ಸಿಕ್ಕಿಬಿದ್ದ 24 ಪ್ರಯಾಣಿಕರು ಪಾರು
ನದಿಯಲ್ಲಿ ತುಂಬಿಹರಿಯುವ ಪ್ರವಾಹದಲ್ಲಿ ಸಿಕ್ಕಿಬಿದ್ದ ಬಸ್‌ನಲ್ಲಿದ್ದ 24 ಪ್ರಯಾಣಿಕರ ಜೀವವುಳಿಸಿದ ಘಟನೆ ಮಂಗಳವಾರ ಸಂಭವಿಸಿದೆ. ಆದರೆ ಇನ್ನೂ 6 ಮಂದಿ ಪ್ರಯಾಣಿಕರ ಸುಳಿವು ಸಿಕ್ಕಿಲ್ಲವೆಂದು ಹೇಳಲಾಗಿದೆ. ಚಿತ್ವೇಲ್ ಬಳಿ ತುಂಬಿಹರಿಯುವ ಗುಂಜಾನಾ ನದಿಯ ಪ್ರವಾಹದಲ್ಲಿ ಸೋಮವಾರ ಸಿಕ್ಕಿಬಿದ್ದ ಬಸ್‌ನಲ್ಲಿ ಚಾಲಕ ಮತ್ತು ನಿರ್ವಾಹಕ ಸೇರಿದಂತೆ 24 ಪ್ರಯಾಣಿಕರು ನಿದ್ರೆಯಿಲ್ಲದ ರಾತ್ರಿಯನ್ನು ಕಳೆದರು.

ರಾಜ್ಯಸರ್ಕಾರವು ಪ್ರವಾಹದಲ್ಲಿ ಸಿಕ್ಕಿಬಿದ್ದ ಪ್ರಯಾಣಿಕರ ಜೀವವುಳಿಸಲು ಬೆಂಗಳೂರಿನಿಂದ ಎರಡು ಹೆಲಿಕಾಪ್ಟರ್‌ ಕಳಿಸುವಂತೆ ಆದೇಶಿಸಿತು.ಆದರೆ ಕೆಟ್ಟ ಹವೆಯಿಂದ ಹೆಲಿಕಾಪ್ಟರ್ ಸ್ಥಳದಲ್ಲಿ ಇಳಿಯಲು ಸಾಧ್ಯವಾಗದೇ ಬೆಂಗಳೂರಿಗೆ ವಾಪಸಾಯಿತೆಂದು ಹೇಳಲಾಗಿದೆ.

ನದಿಯಲ್ಲಿ ಪ್ರವಾಹದ ಮಟ್ಟ ಕ್ರಮೇಣ ಏರಿತೊಡಗಿದಂತೆ ಪ್ರಯಾಣಿಕರು ಬಸ್ ಮೇಲೆ ಏರಿ ಜೀವವುಳಿಸಿಕೊಂಡರು. ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರವಾಹದಲ್ಲಿ ಸಿಕ್ಕಿಬಿದ್ದ ಪ್ರಯಾಣಿಕರಿಗೆ ವಿಶ್ವಾಸ ಮೂಡಿಸಲು ಅಧಿಕಾರಿಗಳು ಸ್ಪಾಟ್‌ಲೈಟ್‌ಗಳನ್ನು ಕೂಡ ಅಳವಡಿಸಿದರು.ಹಗ್ಗದ ಸಹಾಯದಿಂದ ಜಿಲ್ಲಾಡಳಿತವು 18 ಪ್ರಯಾಣಿಕರ ಜೀವವುಳಿಸಿತು, ಈ ಪ್ರಕ್ರಿಯೆಯಲ್ಲಿ ಗೃಹರಕ್ಷ7 ದಳದ ಸಿಬ್ಬಂದಿಯೊಬ್ಬ ಹರಿಯುವ ಪ್ರವಾಹದಲ್ಲಿ ಬಿದ್ದ ಮತ್ತು ಇನ್ನೂ ಕೆಲವರು ನಾಪತ್ತೆಯಾಗಿದ್ದಾರೆ.
ಮತ್ತಷ್ಟು
ಎರಾಲ್ ಹತ್ಯಾಕಾಂಡ: 8 ಮಂದಿಗೆ ಜೀವಾವಧಿ
ಒಪ್ಪಂದದ ಮರುಮಾತುಕತೆ ಇಲ್ಲ: ರೈಸ್
ಆಕಾಶವಾಣಿ, ದೂರದರ್ಶನ ಸಿಬ್ಬಂದಿ ಸಾಮೂಹಿಕ ರಜೆ
ತೃತೀಯರಂಗ ರಚನೆಯಿಲ್ಲ:ಕರಾಟ್
ವಿಧಾನಸಭೆ ವಿಸರ್ಜನೆಗೆ ಕಾಂಗ್ರೆಸ್ ಒತ್ತಾಯ
ಸೋದರನ ಮೇಲೆ ಗುಂಡು ಹಾರಿಸಿಲ್ಲ: ಪ್ರಮೋದ್