ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಪ್ರಮೋದ್ ಅಕ್ರಮ ಸಂಬಂಧ:ಪ್ರವೀಣ್
ಹತ್ಯೆಯಾದ ಬಿಜೆಪಿ ನಾಯಕ ಪ್ರಮೋದ್ ಮಹಾಜನ್‌ ಅವರಿಗೆ ಅನೈತಿಕ ಸಂಬಂಧದಿಂದ ಜನಿಸಿದ ಮಗಳಿದ್ದಾಳೆ ಎಂದು ಆರೋಪಿ ಪ್ರವೀಣ್ ಮಹಾಜನ್ ಮಂಗಳವಾರ ಮುಂಬೈ ಸೆಷನ್ಸ್ ಕೋರ್ಟ್‌ನಲ್ಲಿ ಹೇಳುವ ಮೂಲಕ ಎಲ್ಲರನ್ನೂ ಚಕಿತಗೊಳಿಸಿದ್ದಾರೆ.

ಸೆಷನ್ಸ್ ಕೋರ್ಟ್‌ನಲ್ಲಿ ಎರಡನೆ ದಿನ ಹಾಜರಾದ ಅವರು, ಆ ಮಹಿಳೆಯ ಹೆಸರು ಅಲಕಾನಂದ ಎಂದು ತಿಳಿಸಿದ್ದಾರೆ, ಕಳೆದ ವರ್ಷ ನಿಧನರಾದ ಅವರ ಸೋದರ ವಿವೇಕ್ ಮೊಯಿತ್ರಾಗೆ ಪ್ರಮೋದ್ ಅವರ ಅನೈತಿಕ ಸಂಬಂಧದ ಬಗ್ಗೆ ತಿಳಿದಿತ್ತು ಎಂದು ಪ್ರವೀಣ್ ತಿಳಿಸಿದರು.

ಅನೈತಿಕ ಸಂಬಂಧದ ಬಗ್ಗೆ ತಮ್ಮ ಸೋದರನನ್ನು ತಾವು ಪ್ರಶ್ನಿಸಿದ್ದಾಗಿ ಮತ್ತು ಅವರು ಹತ್ಯೆಯಾದ ದಿನ ಅವರ ಜತೆ ಜಗಳ ಕೂಡ ಆಡಿದ್ದೆ ಎಂದು ಅವರು ಹೇಳಿದ್ದಾರೆ. ಪ್ರಮೋದ್ ಹತ್ಯೆಯಾದ ಬಳಿಕ ಪೊಲೀಸರಿಗೆ ಶರಣಾಗಿದ್ದ ಪ್ರವೀಣ್ ತಾವು ಪ್ರಮೋದ್‌ರನ್ನು ಹತ್ಯೆ ಮಾಡಿದ್ದನ್ನು ಕೋರ್ಟ್‌ನಲ್ಲಿ ಸೋಮವಾರ ನಿರಾಕರಿಸಿದ್ದರು. ಸುದ್ದಿಪತ್ರಿಕೆಗಳ ಮೂಲಕವೇ ತಮಗೆ ಸೋದರನ ಸಾವಿನ ಸುದ್ದಿ ಸಿಕ್ಕಿತೆಂದು ಅವರು ಹೇಳಿದ್ದಾರೆ.

ಏತನ್ಮಧ್ಯೆ, ಸೆಷನ್ಸ್ ಕೋರ್ಟ್ ಮಂಗಳವಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಹಸ್ಯ ವಿಚಾರಣೆ ನಡೆಸಬೇಕೆಂಬ ಪಬ್ಲಿಕ್ ಪ್ರಾಸಿಕ್ಯೂಟರ್ ಮನವಿಗೆ ಒಪ್ಪಿಗೆ ಸೂಚಿಸಿದ್ದಾರೆ.
ಮತ್ತಷ್ಟು
ಪ್ರವಾಹದಲ್ಲಿ ಸಿಕ್ಕಿಬಿದ್ದ 24 ಪ್ರಯಾಣಿಕರು ಪಾರು
ಎರಾಲ್ ಹತ್ಯಾಕಾಂಡ: 8 ಮಂದಿಗೆ ಜೀವಾವಧಿ
ಒಪ್ಪಂದದ ಮರುಮಾತುಕತೆ ಇಲ್ಲ: ರೈಸ್
ಆಕಾಶವಾಣಿ, ದೂರದರ್ಶನ ಸಿಬ್ಬಂದಿ ಸಾಮೂಹಿಕ ರಜೆ
ತೃತೀಯರಂಗ ರಚನೆಯಿಲ್ಲ:ಕರಾಟ್
ವಿಧಾನಸಭೆ ವಿಸರ್ಜನೆಗೆ ಕಾಂಗ್ರೆಸ್ ಒತ್ತಾಯ