ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರ 23ನೇ ಪುಣ್ಯತಿಥಿಯಾದ ಬುಧವಾರ ರಾಷ್ಟ್ರದ ಜನತೆ ಅವರಿಗೆ ಹೃತ್ಪೂರ್ವಕ ನಮನ ಸಲ್ಲಿಸಿತು. ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಮಂತ್ರಿ ಮನಮೋಹನ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಾಜಿ ಪ್ರಧಾನಿಯ ಸಮಾಧಿಯಿರುವ ಶಕ್ತಿ ಸ್ಥಳಕ್ಕೆ ತೆರಳಿ ಪುಷ್ಪ ಗುಚ್ಥ ಅರ್ಪಿಸಿದರು.
ಕೇಂದ್ರ ಸಚಿವರಾದ ಶಿವರಾಜ್ ಪಾಟೀಲ್, ಅಜಯ್ ಮಕೆನ್, ಶ್ರೀಪ್ರಕಾಶ್ ಜೈಸ್ವಾಲ್ ಮತ್ತು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಮತ್ತು ಇಂದಿರಾ ಮೊಮ್ಮಗ ಹಾಗೂ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ರಾಹುಲ್ ಗಾಂಧಿ ಕೂಡ ಸಮಾಧಿಗೆ ಪುಷ್ಪಗುಚ್ಚವಿರಿಸಿ ಗೌರವ ಅರ್ಪಿಸಿದರು.
ಅನೇಕ ಮಂದಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಕೂಡ ಶಕ್ತಿಸ್ಥಳಕ್ಕೆ ಭೇಟಿ ಮಾಡಿದರು. ಅಮೃತಸರದ ಸುವರ್ಣ ಮಂದಿರದಲ್ಲಿ ಬ್ಲೂಸ್ಟಾರ್ ಕಾರ್ಯಾಚರಣೆ ನಡೆಸಿದ್ದಕ್ಕೆ ಪ್ರತೀಕಾರದ ಕ್ರಮವಾಗಿ ಇಂದಿರಾ ಗಾಂಧಿ ಅವರು ಸಿಖ್ ಅಂಗರಕ್ಷಕರಿಂದ 1984ರ ಅ.31ರಂದು ಹತ್ಯೆಗೀಡಾಗಿದ್ದರು.
|