ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ರಿಜ್ವಾನುರ್ ಸಾವು: ಉದ್ಯಮಿ ಟೋಡಿ ತನಿಖೆ
ಕಂಪ್ಯೂಟರ್ ಗ್ರಾಫಿಕ್ಸ್ ಶಿಕ್ಷಕ ರಿಜ್ವಾನುರ್ ರೆಹ್ಮಾನ್ ಅವರ ನಿಗೂಢ ಸಾವಿಗೆ ಸಂಬಂಧಪಟ್ಟಂತೆ ಸಿಬಿಐ ಬುಧವಾರ ಕೈಗಾರಿಕೋದ್ಯಮಿ ಅಶೋಕ್ ಟೋಡಿ ಅವರನ್ನು ತನಿಖೆಗೆ ಒಳಪಡಿಸಿತು.

ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಅಣ್ಣ ಸ್ನೇಹಸಿಸ್ ಗಂಗೂಲಿ ಮತ್ತು ರಿಜ್ವಾನುರ್ ಪತ್ನಿ ಪ್ರಿಯಾಂಕ ಟೋಡಿಯ ಚಿಕ್ಕಪ್ಪನನ್ನು ಕೂಡ ಸಿಬಿಐ ತನಿಖೆಗೆ ಒಳಪಡಿಸಿತು. ಮಾಜಿ ಪೊಲೀಸ್ ಮುಖ್ಯಸ್ಥ ಪ್ರಸುನ್ ಮುಖರ್ಜಿ ಅವರನ್ನು ಬಳಿಕ ತನಿಖೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಅಶೋಕ್ ಟೋಡಿ ಅವರ ಪುತ್ರಿಯಾದ ಪ್ರಿಯಾಂಕ ಮತ್ತು ತಾಯಿಯನ್ನು ಸಿಬಿಐ ಈಗಾಗಲೇ ತನಿಖೆ ಮಾಡಿದೆ. ರಿಜ್ವಾನುರ್ ಮತ್ತು ಅವರ ಪತ್ನಿ ಪ್ರಿಯಾಂಕ ಬೇರ್ಪಡುವಂತೆ ಒತ್ತಡ ಹೇರಿದ ಬಳಿಕ ರಾಜ್ಯಸರ್ಕಾರದಿಂದ ವಜಾಗೊಂಡ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಕೂಡ ಸಿಬಿಐ ತನಿಖೆ ಮಾಡಿತು.
ಮತ್ತಷ್ಟು
ಮೋದಿ ನಮ್ಮ ಗುರಿಯಲ್ಲ :ಕಾಂಗ್ರೆಸ್
ಇಂದಿರಾ ಗಾಂಧಿಗೆ ದೇಶದ ನಮನ
ಪ್ರಧಾನಿ ಪ್ರಾಮಾಣಿಕತೆ ಪ್ರಶ್ನಿಸುವಂತಿಲ್ಲ: ಕಾರಟ್
ಸರ್ಕಾರ ಸ್ಥಾಪನೆ ವಿಳಂಬಕ್ಕೆ ನಾಯ್ಡು ಟೀಕೆ
ಪ್ರಮೋದ್ ಅಕ್ರಮ ಸಂಬಂಧ:ಪ್ರವೀಣ್
ಪ್ರವಾಹದಲ್ಲಿ ಸಿಕ್ಕಿಬಿದ್ದ 24 ಪ್ರಯಾಣಿಕರು ಪಾರು