ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಗಲ್ಲುಶಿಕ್ಷೆಗೆ ವೈಯಕ್ತಿಕ ಮಟ್ಟದಲ್ಲಿ ವಿರೋಧ: ಕಲಾಂ
PTI
ಸಂಸತ್ತಿನ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಫ್ಜಲ್ ಗುರು ಕ್ಷಮಾದಾನ ಕೋರಿಕೆಗೆ ಸಂಬಂಧಪಟ್ಟ ಸರ್ಕಾರದ ಅಭಿಪ್ರಾಯಗಳು ಅಧಿಕಾರ ತ್ಯಜಿಸುವ ತನಕ ತಮಗೆ ತಲುಪಲೇ ಇಲ್ಲ ಎಂದು ಎಂದು ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಬಹಿರಂಗಮಾಡುವ ಮೂಲಕ ಚಕಿತಗೊಳಿಸಿದ್ದಾರೆ.

ನಾನು ರಾಷ್ಟ್ರಪತಿ ಆಗಿರುವ ತನಕ ಅದು ಬರಲೇ ಇಲ್ಲ. ಆದ್ದರಿಂದ ಅದರ ಬಗ್ಗೆ ನಿರ್ದಾರ ಕೈಗೊಳ್ಳುವ ಪ್ರಶ್ನೆಯೇ ಉದ್ಭವಿಸಲಿಲ್ಲ ಎಂದು ಸುದ್ದಿಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಕಲಾಂ ಹೇಳಿದ್ದಾರೆ. ಕ್ಷಮಾದಾನ ಅರ್ಜಿಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳದ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಅವರು ಮೇಲಿನಂತೆ ಉತ್ತರಿಸಿದರು.

ವೈಯಕ್ತಿಕ ಮಟ್ಟದಲ್ಲಿ ಗಲ್ಲು ಶಿಕ್ಷೆಗೆ ತಮ್ಮ ವಿರೋಧವಿದೆ ಎಂದು ಹೇಳಿದರು. ಗಲ್ಲು ಶಿಕ್ಷೆಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಮಾಡುವ ಅಗತ್ಯವಿದೆ ಎಂದಷ್ಟೇ ಹೇಳಿದರು. ಲಾಭದಾಯಕ ಹುದ್ದೆಯ ಮಸೂದೆಯನ್ನು ಹಿಂತಿರುಗಿಸಿದ ವಿವಾದದ ಬಗ್ಗೆ ಕೂಡ ಕಲಾಂ ಸ್ಪಷ್ಟಪಡಿಸಿ, ಮಸೂದೆಗೆ ವೈಯಕ್ತಿಕ ಮಟ್ಟದಲ್ಲಿ ತಮ್ಮ ದೃಢ ವಿರೋಧವಿದೆ ಎಂದು ಸಂದೇಶ ಕಳಿಸುವುದು ತಮ್ಮ ಉದ್ದೇಶವಾಗಿತ್ತು ಎಂದು ಕಲಾಂ ಹೇಳಿದರು. ನಾನು ಮಸೂದೆಯನ್ನು ಏಕೆ ವಾಪಸು ಮಾಡುತ್ತಿರುವುದೆಂದು ಟಿಪ್ಪಣಿ ಕೂಡ ಹಾಕಿ ಕಳಿಸಿದ್ದೆ ಎಂದು ಕಲಾಂ ಹೇಳಿದರು.
ಮತ್ತಷ್ಟು
ರಿಜ್ವಾನುರ್ ಸಾವು: ಉದ್ಯಮಿ ಟೋಡಿ ತನಿಖೆ
ಮೋದಿ ನಮ್ಮ ಗುರಿಯಲ್ಲ :ಕಾಂಗ್ರೆಸ್
ಇಂದಿರಾ ಗಾಂಧಿಗೆ ದೇಶದ ನಮನ
ಪ್ರಧಾನಿ ಪ್ರಾಮಾಣಿಕತೆ ಪ್ರಶ್ನಿಸುವಂತಿಲ್ಲ: ಕಾರಟ್
ಸರ್ಕಾರ ಸ್ಥಾಪನೆ ವಿಳಂಬಕ್ಕೆ ನಾಯ್ಡು ಟೀಕೆ
ಪ್ರಮೋದ್ ಅಕ್ರಮ ಸಂಬಂಧ:ಪ್ರವೀಣ್