ಕರ್ನಾಟಕದಲ್ಲಿರುವ ರಾಷ್ಟ್ರಪತಿ ಆಡಳಿತವನ್ನು ಕೇಂದ್ರ ಸರಕಾರವು ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ಬುಧವಾರ ದೆಹಲಿಯಲ್ಲಿ ವರದಿ ಮಾಡಿವೆ.ಬುಧವಾರ ಸಂಜೆ ಕಾಂಗ್ರೆಸ್ ಪಕ್ಷದ ವರಿಷ್ಠರ ಸಭೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.
ಈ ವಿಷಯದ ಬಗ್ಗೆ ಅಂತಿಮ ಕರೆಯನ್ನು ನೀಡಲು ರಾಜಕೀಯ ವ್ಯವಹಾರಗಳ ಸಂಪುಟ ಸಭೆ ಗುರುವಾರ ಮುಂಜಾನೆ ಸಭೆ ಸೇರಲಿದೆ.ರಾಜ್ಯದಲ್ಲಿ ನಡೆಯುತ್ತಿರುವ ವಿವರಗಳ ವರದಿಯನ್ನು ರಾಜ್ಯಪಾಲ ರಾಮೇಶ್ವರ್ ತಾಕೂರ್ ಕೇಂದ್ರಕ್ಕೆ ಒಪ್ಪಸಿದ ಬಳಿಕ ಮತ್ತು ಹಿರಿಯ ಬಿಜೆಪಿ ನಾಯಕರು ಪ್ರಧಾನಿಯನ್ನು ಭೇಟಿ ಮಾಡಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.
ಸಿಸಿಪಿಎ ರಾಷ್ಟ್ರಪತಿ ಆಡಳಿತವನ್ನು ಹಿಂತೆಗೆದುಕೊಳ್ಳುವಂತೆ ಸೂಚನೆ ನೀಡುವಂತೆ ಮತ್ತು ಕಳೆದ ತಿಂಗಳಿನಿಂದ ಅಮಾನತಿನಲ್ಲಿದ್ದ ವಿಧಾನಸಭೆಗೆ ಮರುಜೀವ ನೀಡುವ ನಿರೀಕ್ಷೆಯಿದೆ.
ಬಿಜೆಪಿ ಜೆಡಿ(ಎಸ್) ನೂತನ ಸರಕಾರ ರಚಿಸುವ ಕುರಿತಾಗಿ ರಾಜ್ಯದಲ್ಲಿರುವ ರಾಜಕೀಯ ಸ್ಥಿತಿಗಳ ಬಗ್ಗೆ ರಾಜ್ಯಪಾಲ ರಾಮೇಶ್ವರ್ ತಾಕೂರ್ ಕೇಂದ್ರಕ್ಕೆ ಬುಧವಾರ ರಾತ್ರಿ ಕೇಂದ್ರಕ್ಕೆ ನೀಡಿದ್ದ ವಿಸ್ತಾರವಾದ ವರದಿಯನ್ನು ಈ ಸಭೆಯು ಪರಿಗಣಿಸಲಿದೆ.
ಈ ಹಿಂದೆ ಪ್ರಧಾನಿ ಮನಮೋಹನ್ ಸಿಂಗ್ ನಾವು ಸಂವಿಧಾನದ ಕಾನೂನಿನಂತೆ ಮುಂದುವರಿಯುತ್ತೇವೆ ಎಂದು ಬಿಜೆಪಿ ನಾಯಕರಿಗೆ ಭರವಸೆ ನೀಡಿದ್ದರು. ರಾಜ್ಯದಲ್ಲಿನ ರಾಷ್ಟ್ರಪತಿ ಆಡಳಿತವನ್ನು ಹಿಂತೆಗೆದುಕೊಳ್ಳುವಂತೆ ಪ್ರಧಾನಿಯವರನ್ನು ಬಿಜೆಪಿ ನಾಯಕರು ಒತ್ತಾಯಿಸಿದ್ದರು.
|