ಬಾಬ್ರಿ ಮಸೀದಿ ಧ್ವಂಸಕ್ಕೆ ಕಾರಣವಾದ ಸನ್ನಿವೇಶಗಳ ಕುರಿತು ತನಿಖೆ ನಡೆಸುತ್ತಿರುವ ಲಿಬರ್ಹಾನ್ ಆಯೋಗದ ಅವಧಿಯನ್ನು 42ನೇ ಬಾರಿಗೆ ಮತ್ತೆ ಎರಡು ತಿಂಗಳ ಕಾಲ ವಿಸ್ತರಿಸಲಾಗಿದೆ.
1992ರಲ್ಲಿ ಬಾಬ್ರಿ ಮಸೀದಿ ನಾಶವಾದ ಕೂಡಲೇ ಸ್ಥಾಪಿಸಲಾಗಿದ್ದ ಆಯೋಗ ಪುನರಪಿ ವಿಸ್ತರಿತ ಅವಧಿಗಳ ಬಳಿಕವೂ ತನ್ನ ಕಾರ್ಯವನ್ನು ಪೂರ್ಣಗೊಳಿಸಲು ವಿಫಲವಾಗಿದೆ. ಇದೀಗ ಆಯೋಗದ ಅವಧಿಯನ್ನು ಡಿಸೆಂಬರ್ 31ರ ತನಕ ವಿಸ್ತರಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಆಯೋಗಕ್ಕೆ ಇನ್ನು ವಿಸ್ತರಣೆ ನೀಡಲಾಗುವುದಿಲ್ಲವೆಂದು ಸರಕಾರ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರೂ ಆ.31ರಂದು ಅದರ ಅವಧಿಯನ್ನು ವಿಸ್ತರಿಸಲಾಗಿತ್ತು.ಆಯೋಗಕ್ಕಾಗಿ ಸರಕಾರ 7.20 ಕೋಟಿ ರೂಪಾಯಿ ವ್ಯಯಿಸಲಾಗಿತ್ತು.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಆಡ್ವಾಣಿ,ಮುರಳಿಮನೋಹರ್ ಜೋಶಿ,ಉಮಾಭಾರತಿ ಹಾಗೂ ವಿಶ್ವಹಿಂದೂ ಪರಿಷತ್‌ನ ಪ್ರಮುಖರು ವಿಚಾರಣೆಯನ್ನು ಎದುರಿಸುತ್ತಿದ್ದಾರೆ.
|