ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಕರ್ನಾಟಕ ರಾಜಕೀಯ:ಪ್ರಧಾನಿ-ಸೋನಿಯಾ ಚರ್ಚೆ
ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರು ಬುಧವಾರ ರಾತ್ರಿ ಕರ್ನಾಟಕ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಮಾತುಕತೆ ನಡೆಸಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ಕೂಟವು ಸರಕಾರ ರಚನೆಗೆ ಹಕ್ಕು ಸಲ್ಲಿಸಿರುವ ಹಿನ್ನೆಲೆಯಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ.

ಕೆಲವೇ ದಿನಗಳ ಹಿಂದಷ್ಟೆ ಕಚ್ಚಾಡಿಕೊಂಡು ದೂರ ನಡೆದ ಬಿಜೆಪಿ-ಜೆಡಿಎಸ್‌ಗಳು ಮತ್ತೆ ಇದ್ದಕ್ಕಿದ್ದಂತೆ ಒಂದಾಗಿ ಸರಕಾರ ರಚನೆಗೆ ಮುಂದಾಗಿರುವ ಒಳಿತು ಕೆಡುಕುಗಳ ಕುರಿತು ಕಾಂಗ್ರೆಸ್‌ನ ಉನ್ನತ ನಾಯಕರು ಮತ್ತು ಕೇಂದ್ರ ಸಚಿವರು ಅವಲೋಕನ ನಡೆಸಿದರು.

ಬಿಜೆಪಿಯ ಉನ್ನತ ನಿಯೋಗವು ಪ್ರಧಾನಿಯವರನ್ನು ಭೇಟಿ ಮಾಡಿ ಸರಕಾರ ರಚನೆಗೆ ಅವಕಾಶ ನೀಡಬೇಕೆಂದು ಬುಧವಾರ ಒತ್ತಾಯಿಸಿದ ಬಳಿಕ ಕಾಂಗ್ರೆಸ್‌ನ ಪ್ರಮುಖ ನಾಯಕರ ಸಭೆ ನಡೆದಿದೆ.

ಬಿಜೆಪಿ ಹಿರಿಯ ನಾಯಕ ಆಡ್ವಾಣಿ, ಅಧ್ಯಕ್ಷ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಬಿಜೆಪಿ ನಿಯೋಗವು ಪ್ರಧಾನಿಯವರನ್ನು ಭೇಟಿಯಾಗಿ ಸರಕಾರ ರಚನೆಗೆ ಹಕ್ಕು ಸಲ್ಲಿಸಿ ನಾಲ್ಕು ದಿನಗಳು ಕಳೆದರೂ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಯ ಹಿಂತೆಗೆತಕ್ಕೆ ಇನ್ನೂ ಶಿಫಾರಸು ಮಾಡಿಲ್ಲ ಎಂದು ದೂರಿದ್ದರು.

ಕೇಂದ್ರವು ಈ ಕುರಿತಂತೆ ಸಂವಿಧಾನ ಬದ್ಧವಾಗಿ ನಡೆದುಕೊಳ್ಳಲಿದೆ ಎಂದು ಪ್ರಧಾನಿಯವರು ಈ ಸಂದರ್ಭದಲ್ಲಿ ನಿಯೋಗಕ್ಕೆ ಭರವಸೆ ನೀಡಿದ್ದರು.
ಮತ್ತಷ್ಟು
ಬಾಬ್ರಿ ಮಸೀದಿ:ಲಿಬರ್‌ಹಾನ್ ಆಯೋಗ ಮತ್ತೆ ವಿಸ್ತರಣೆ
ರಾಷ್ಟ್ರಪತಿ ಆಡಳಿತ ಹಿಂತೆಗೆತ ಸಂಭವ
ಗಲ್ಲುಶಿಕ್ಷೆಗೆ ವೈಯಕ್ತಿಕ ಮಟ್ಟದಲ್ಲಿ ವಿರೋಧ: ಕಲಾಂ
ರಿಜ್ವಾನುರ್ ಸಾವು: ಉದ್ಯಮಿ ಟೋಡಿ ತನಿಖೆ
ಮೋದಿ ನಮ್ಮ ಗುರಿಯಲ್ಲ :ಕಾಂಗ್ರೆಸ್
ಇಂದಿರಾ ಗಾಂಧಿಗೆ ದೇಶದ ನಮನ