ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸ್ವಾಯತ್ತ ಮಂಡಳಿ: ದೆಹಲಿಯಲ್ಲಿ ಕೊಡವರ ಪ್ರತಿಭಟನೆ
ಡಾರ್ಜಿಲಿಂಗ್ ಗೂರ್ಖಾ ಹಿಲ್ ಕೌನ್ಸಿಲ್ ಮಾದರಿಯಲ್ಲೇ ಕರ್ನಾಟಕದಲ್ಲಿ ತಮಗೂ ಪ್ರತ್ಯೇಕ ಕೊಡವ ಸ್ವಾಯತ್ತ ಪ್ರದೇಶಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿ, ಸಾಂಪ್ರದಾಯಿಕ ದಿರಿಸು ಧರಿಸಿದ್ದ ಕೊಡವರ ಸಣ್ಣ ಗುಂಪೊಂದು ಗುರುವಾರ ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿತು.

1956ರಲ್ಲಿ ಕರ್ನಾಟಕದ ಜತೆ ಏಕೀಕರಣವಾಗುವವರೆಗೂ ಕೊಡಗು ಎಂಬುದು ಹಲವು ಸಂಸ್ಥಾನಗಳಂತೆಯೇ ಒಂದು ರಾಜಮನೆತನದ ಆಳ್ವಿಕೆಗೊಳಪಟ್ಟಿತ್ತು. ತಮ್ಮ ಬೇಡಿಕೆ ಈಡೇರಿಕೆ ಆಗ್ರಹಿಸಿ ಕರ್ನಾಟಕ ರಾಜ್ಯೋತ್ಸವ ದಿನವಾದ ನವೆಂಬರ್ 1ರಂದು ಕೊಡವ ರಾಷ್ಟ್ರೀಯ ಮಂಡಳಿಯು ಧರಣಿಗಳನ್ನು ನಡೆಸುತ್ತಲೇ ಬಂದಿತ್ತು.

ಸ್ವಾಯತ್ತ ಪ್ರದೇಶ ಮಂಡಳಿ ರಚಿಸಬೇಕು, ಕೊಡವ ಭಾಷೆಗೆ ಸಂವಿಧಾನದ 340, 342ನೇ ವಿಧಿಯನುಸಾರ ಜನಾಂಗೀಯ ಬುಡಕಟ್ಟು ಭಾಷೆ ಸ್ಥಾನಮಾನ ನೀಡಬೇಕು ಹಾಗೂ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕೊಡವ ಭಾಷಿಗರಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಅದು ಆಗ್ರಹಿಸುತ್ತಾ ಬಂದಿದೆ.

ತಮ್ಮ ಕೊಡವ ಸಂಸ್ಥಾನವನ್ನು ಕೇವಲ ಮೂರು ತಾಲೂಕುಗಳುಳ್ಳ ಜಿಲ್ಲೆಗೆ ಸೀಮಿತಗೊಳಿಸಿದ ಕರ್ನಾಟಕ ಸರಕಾರದ ಕ್ರಮವನ್ನು ಟೀಕಿಸಿರುವ ಕೊಡವರು, ಕೊಡವರು ಕೇವಲ ಮೂವರು ಶಾಸಕರನ್ನು ಮಾತ್ರವೇ ಚುನಾಯಿಸಬಹುದು, ಸಂಸತ್ತಿಗೆ ಯಾವುದೇ ಪ್ರಾತಿನಿಧ್ಯವಿಲ್ಲ. ಯಾಕೆಂದರೆ ನಾವು ಕುಟುಂಬ ಯೋಜನೆಯನ್ನು ಸ್ವೀಕರಿಸಿದ್ದೇವೆ ಎಂದು ಕೊಡವ ರಾಷ್ಟ್ರೀಯ ಮಂಡಳಿ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.
ಮತ್ತಷ್ಟು
ಕರ್ನಾಟಕ ರಾಜಕೀಯ:ಪ್ರಧಾನಿ-ಸೋನಿಯಾ ಚರ್ಚೆ
ಬಾಬ್ರಿ ಮಸೀದಿ:ಲಿಬರ್‌ಹಾನ್ ಆಯೋಗ ಮತ್ತೆ ವಿಸ್ತರಣೆ
ರಾಷ್ಟ್ರಪತಿ ಆಡಳಿತ ಹಿಂತೆಗೆತ ಸಂಭವ
ಗಲ್ಲುಶಿಕ್ಷೆಗೆ ವೈಯಕ್ತಿಕ ಮಟ್ಟದಲ್ಲಿ ವಿರೋಧ: ಕಲಾಂ
ರಿಜ್ವಾನುರ್ ಸಾವು: ಉದ್ಯಮಿ ಟೋಡಿ ತನಿಖೆ
ಮೋದಿ ನಮ್ಮ ಗುರಿಯಲ್ಲ :ಕಾಂಗ್ರೆಸ್