ಮೂವರು ಪತ್ರಕರ್ತರನ್ನು ಮನಬಂದಂತೆ ಸೋಮವಾರ ಥಳಿಸಿದ ಬಿಹಾರದ ಶಾಸಕ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಪ್ರತಿಪಕ್ಷ ಆರ್‌ಜೆಡಿ ಪತ್ರಕರ್ತರ ಮೇಲಿನ ದಾಳಿಯ ವಿರುದ್ಧ ಶುಕ್ರವಾರ ರಾಜ್ಯವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಈ ಕುರಿತು ಸಿಬಿಐ ತನಿಖೆ ಮಾಡುವಂತೆ ಆಗ್ರಹಿಸಿದೆ.
ಪತ್ರಕರ್ತರ ಮೇಲೆ ದಾಳಿಯು ಪತ್ರಿಕಾ ಸ್ವಾತಂತ್ರ್ಯದ ವಿರುದ್ಧ ಹಲ್ಲೆ ಎಂದು ಪ್ರತಿಪಕ್ಷದ ನಾಯಕಿ ರಾಬ್ಡಿ ದೇವಿ ಹೇಳಿದ್ದಾರೆ. ಈ ಘಟನೆಯ ಬಗ್ಗೆ ಸಿಬಿಐ ತನಿಖೆಗೆ ಅವರು ಆಗ್ರಹಿಸಿದ್ದಾರೆ.
ಬಿಹಾರದಲ್ಲಿ ಪತ್ರಕರ್ತರಿಗೆ ರಕ್ಷಣೆ ಕೂಡ ಇಲ್ಲದ ಕಾನೂನು ಸುವ್ಯವಸ್ಥೆಯ ದುರ್ಬಲ ಸ್ಥಿತಿಯನ್ನು ವಿವರಿಸಲು ಪ್ರಧಾನಿ ಮನಮೋಹನ ಸಿಂಗ್ ಮತ್ತು ಕೇಂದ್ರ ಸಚಿವ ಶಿವರಾಜ್ ಪಾಟೀಲ್‌ಗೆ ಪತ್ರ ಬರೆಯಲಿದ್ದೇನೆ ಎಂದು ಅವರು ನುಡಿದರು.
|