ಗೋಧ್ರಾ ಹತ್ಯಾಕಾಂಡದ ನಂತರ ಗುಜರಾತ್ ಮುಖ್ಯಮಂತ್ರಿ ವಿರುದ್ಧ ತೆಹಲ್ಕಾ ನಡೆಸಿದ ಕುಟುಕು ಕಾರ್ಯಾಚರಣೆಯನ್ನು ಎದುರಿಸುವ ನಿಟ್ಟಿನಲ್ಲಿ ಭಾರತೀಯ ಜನತಾ ಪಕ್ಷ ಸಿದ್ದವಾಗಿದ್ದು. ಅದು ಇಂದಿರಾ ಗಾಂಧಿ ಅವರ ಹತ್ಯೆಯ ನಂತರ ನಡೆದ ಸಿಖ್ ನರಮೇಧವನ್ನು ಕಾಂಗ್ರೆಸ್ ವಿರುದ್ಧ ಬಳಸಿಕೊಳ್ಳಲು ಯೋಜನೆ ನಡೆಸಿದೆ.
ಭಾರತೀಯ ಜನತಾ ಪಕ್ಷದ ಕೇಂದ್ರ ಕಾರ್ಯಾಲಯದಲ್ಲಿ ಸಿಖ್ ನರಮೇಧಕ್ಕೆ ಸಂಬಂಧಿಸಿದಂತೆ ನ್ಯಾಯದ ನಿರಾಕರಣೆ ಎಂಬ ಹಣೆ ಪಟ್ಟಿ ಹೊತ್ತ ಪೋಸ್ಟರುಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳಲಿದೆ. ಜಮ್ಮು ವಿಭಾಗದ ಭಾರತೀಯ ಜನತಾ ಪಕ್ಷದ ಮುಖ್ಯಸ್ಥ ಆರ್. ಪಿ ಸಿಂಗ್ ಅವರು ಪ್ರಚಾರದ ಹೊಣೆ ಹೊತ್ತಿದ್ದು, ನರಮೇಧದಲ್ಲಿ ಬಲಿಯಾದವರಿಗೆ ನ್ಯಾಯವನ್ನು ನಿರಾಕರಿಸುವ ವ್ಯವಸ್ಥಿತ ಸಂಚು ನಡೆದಿದೆ ಎಂದು ಭಾರತೀಯ ಜನತಾ ಪಕ್ಷ ಬಿಂಬಿಸುತ್ತಿದೆ.
ಕೆಲ ಅಲ್ಪಸಂಖ್ಯಾತರ ಹಕ್ಕುಗಳು ನಗಣ್ಯವೇ ಎಂದು ಕೂಡ ಬಿಜೆಪಿ ಪ್ರಶ್ನೆ ಎತ್ತಿದೆ. ಆರ್. ಪಿ ಸಿಂಗ್ ಅವರು, ಇದು ಪಕ್ಷದ ವತಿಯಿಂ ದ ಸಿಖ್ ನರಮೇಧದ ಕುರಿತು ಪ್ರಚಾರ ನಡೆಸುತ್ತಿಲ್ಲ ಬದಲಾಗಿ ವೈಯಕ್ತಿಕವಾಗಿ ಸಿಖ್ ಸಮುದಾಯದ ಸಾಮೂಹಿಕ ಹತ್ಯಾಕಾಂಡದ ಪ್ರಶ್ನೆಯನ್ನು ಎತ್ತುತ್ತಿದ್ದೆನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗುಜರಾತ್‍ನಲ್ಲಿ ಸಂಭವಿಸಿದ ಕೋಮುಗಲಭೆಯನ್ನು ಕಾಂಗ್ರೆಸ್ ವ್ಯವಸ್ಥಿತವಾಗಿ ಮೋದಿ ವಿರುದ್ಧ ಬಳಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಆದರೆ ಅವರು ಮಾಡಿರುವ ಸಿಖ್ ನರಮೇಧವನ್ನು ಮರೆತಂತೆ ಕಾಣುತ್ತದೆ ಎಂದು ಸಿಂಗ್ ಪ್ರಶ್ನಿಸಿದ್ದಾರೆ.
|