ಶಸ್ತ್ರಾಸ್ತ್ರ ಕಾನೂನ ಅಡಿಯಲ್ಲಿ ಟಾಡಾ ನ್ಯಾಯಾಲಯದಿಂದ ಆರು ವರ್ಷಗಳ ಕಠಿಣ ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಂಜಯ ದತ್, ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆಯನ್ನು ಶುಕ್ರವಾರ ಸರ್ವೋಚ್ಚ ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ.
ಅಕ್ರಮವಾಗಿ ಎಕೆ-56 ರೈಫಲ್ ಇಟ್ಟುಕೊಂಡ ಆರೋಪದ ಮೇಲೆ ಶಿಕ್ಷೆಗೆ ಗುರಿಯಾಗಿರುವ ಸಂಜಯ ದತ್ ಅವರು ತನಗೆ ವಿಧಿಸಿದ ಶಿಕ್ಷೆಯ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಜಾಮೀನು ಮನವಿ ಸಲ್ಲಿಸಿದ್ದಾರೆ. ಅಕ್ಟೋಬ್ 22 ರಂದು ನ್ಯಾಯಾಲಯಕ್ಕೆ ಶರಣಾದ ಬಾಲಿವುಡ್ ನಟ ಸಂಜಯ ದತ್ ಅವರು ಪುಣೆಯಲ್ಲಿನ ಯರವಾಡಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ
ಅಕ್ರಮ ಶಸ್ತಾಸ್ತ್ರ ಸಂಗ್ರಹದ ಆರೋಪದ ಮೇಲೆ ಬಂಧಿತನಾಗಿ ನಂತರ ಜಾಮೀನು ಮೇಲೆ ಬಿಡುಗಡೆಯಾದ ನಂತರ ತಮ್ಮ ಕಕ್ಷಿದಾರ ಸಂಜಯ ದತ್ ಅವರು ಒಂದೇ ಒಂದು ಬಾರಿ ಕೂಡ ಕಾನೂನು ಉಲ್ಲಂಘಿಸಿಲ್ಲ. ಕಳೆದ ಒಂದು ದಶಕದಿಂದ ಅವರು ನಡತೆ ಉತ್ತಮವಾಗಿದ್ದು ಈ ಆಧಾರದ ಮೇಲೆ ಬಾಲಿವುಡ್ ನಟನಿಗೆ ಜಾಮೀನು ನೀಡಬೇಕು ಎಂದು ನ್ಯಾಯಾಲಯವನ್ನು ಕೇಳಿಕೊಂಡಿದ್ದಾರೆ.
|