ದಿವಂಗತ ನಟ ಶಿವಾಜಿ ಗಣೇಶನ್ ಅವರ ಪತ್ನಿ, ಕಮಲಾ ಗಣೇಶನ್ ಅಲ್ಪ ಕಾಲದ ಅನಾರೋಗ್ಯದ ಬಳಿಕ ಇಂದು ಬೆಳಗ್ಗೆ ಚೆನ್ನೈ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.
ಅವರಿಗೆ 68 ವರ್ಷ ವಯಸ್ಸಾಗಿತ್ತು. ಅವರಿಗೆ ನಟ ಪ್ರಭು ಮತ್ತು ನಟ-ನಿರ್ಮಾಪಕ ರಾಮ್‌ಕುಮಾರ್ ಮತ್ತು ಒಬ್ಬ ಪುತ್ರಿಯಿದ್ದಾರೆ.
ಅಕ್ಟೋಬರ್ 31ರಂದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಬೆಳಗ್ಗೆ 10.50ರವೇಳೆಗೆ ಅವರು ಕೊನೆಯುಸಿರೆಳೆದಿದ್ದು, ಕುಟುಂಬ ಸದಸ್ಯರು ಆಸ್ಪತ್ರೆಯಲ್ಲಿ ಹಾಜರಿದ್ದರು.
|