ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ವಿರೋಧ ಪಕ್ಷವಾದ ಆರ್‌ಜೆಡಿ ಶುಕ್ರವಾರ ಬಿಹಾರ್ ಬಂದ್‌ಗೆ ಕರೆ ನೀಡಿದೆ.
ಈ ಘಟನೆಯನ್ನು ಖಂಡಿಸಿ,ಆಡಳಿತರೂಢ ಪಕ್ಷದ ವಿರುದ್ಧ ರಾಷ್ಟ್ರೀಯ ಜನತಾದಳದ ವರಿಷ್ಠ ಲಾಲೂಪ್ರಸಾದ್ ಯಾದವ್ ನೇತೃತ್ವದಲ್ಲಿ ಬಿಹಾರ್ ಬಂದ್ ನಡೆಯುತ್ತಿದೆ.
ಮಹಿಳೆಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಆಡಳಿತರೂಢ ಜೆಡಿ(ಯು)ಶಾಸಕನ ನಿವಾಸಕ್ಕೆ ತೆರಳಿದ್ದ ಟಿವಿ ವಾಹಿನಿಯ ಮೂವರು ಪತ್ರಕರ್ತರ ಮೇಲೆ ಶಾಸಕ ಹಾಗೂ ಆತನ ಬೆಂಬಲಿಗರು ಗುರುವಾರದಂದು ಹಲ್ಲೆ ನಡೆಸಿದ್ದರು.
ಹತ್ಯೆ ಆರೋಪಿ ಮೊಕಾಮಾದ ಜೆಡಿಯು ಶಾಸಕ ಅನಂತ್ ಸಿಂಗ್ ನಿವಾಸಕ್ಕೆ ತೆರಳಿದ್ದ ಎನ್‌ಡಿಟಿವಿಯ ಪ್ರಕಾಶ್ ಸಿಂಗ್,ಛಾಯಗ್ರಾಹಕ ಹಬೀಬ್ ಅಲಿ ಹಾಗೂ ಅಜಯ್ ಕುಮಾರ್ ಅವರನ್ನು ಶಾಸಕರು ಮತ್ತು ಬೆಂಬಲಿಗರು ಚೆನ್ನಾಗಿ ಥಳಿಸಿದ್ದರು.
ಪ್ರಕರಣದ ಹಿನ್ನೆಲೆಯಲ್ಲಿ ಶಾಸಕ ಅನಂತ್ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ.ಅವರನ್ನು ನ.13ರ ತನಕ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
|