ಉತ್ತರ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಬಾಕಿಉಳಿದಿರುವ ಯೋಜನೆಗಳು, ಗಂಗಾ ನದಿ ಮತ್ತು ಭಾಗೀರಥಿ ನದಿ ಪಾತ್ರಗಳಲ್ಲಿ ಕೊರೆತ ನಿವಾರಣೆ ಸೇರಿದಂತೆ ಪ್ರವಾಹ ನಿಯಂತ್ರಣ ಕಾರ್ಯಕ್ರಮಗಳಿಗೆ 8000 ಕೋಟಿ ರೂ.ಪ್ಯಾಕೇಜ್ ನೀಡಲು ಕೇಂದ್ರ ಸರ್ಕಾರ ತಾತ್ವಿಕ ಅನುಮೋದನೆ ನೀಡಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನದಿ ನಿರ್ವಹಣೆ ಕಾರ್ಯಕ್ರಮಕ್ಕೆ 8000 ಕೋಟಿ ರೂ. ಕಾರ್ಯಕ್ರಮಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿತು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಿಯರಂಜನ್ ದಾಸ್ ಮುನ್ಷಿ ವರದಿಗಾರರಿಗೆ ಇಲ್ಲಿ ತಿಳಿಸಿದರು.
ನದಿ ನಿರ್ವಹಣೆ, ಪ್ರವಾಹ ನಿಯಂತ್ರಣ, ಸವೆತ ನಿವಾರಣೆ ಕೆಲಸಗಳು, ಚರಂಡಿ ಅಭಿವೃದ್ಧಿ, ಪ್ರವಾಹಪೀಡಿತ ಪ್ರದೇಶಗಳ ಅಭಿವೃದ್ಧಿ ಕಾರ್ಯಕ್ರಮಗಳು ಕೂಡ ಯೋಜನೆಯಲ್ಲಿ ಸೇರಿವೆ.ಕೇಂದ್ರದ ನೆರವಿನ ಯೋಜನೆಗಳನ್ನು ಕಾರ್ಯದರ್ಶಿಗಳ ಅಧಿಕಾರಯುಕ್ತ ಸಮಿತಿಯು ಆಯ್ಕೆ ಮಾಡಿದೆ.
ವಿವರವಾದ ಪ್ರಾಜೆಕ್ಟ್ ವರದಿಯ ಆಧಾರದ ಮೇಲೆ ಗಂಗಾ, ಬ್ರಹ್ಮಪುತ್ರಾ, ಬಾರತ್ ನದಿ ಪಾತ್ರಗಳು ಯೋಜನೆಯ ವ್ಯಾಪ್ತಿಗೆ ಬರುತ್ತವೆ.
|