ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ನಕ್ಸಲೀಯರ ದಾಳಿ ಪ್ರತಿಭಟಿಸಿ ಬಂದ್
ಚತ್ತೀಸ್‌ಗಢದ ಬುಡಕಟ್ಟು ಜಿಲ್ಲೆ ಬಸ್ತಾರ್‌ನಲ್ಲಿ ನಕ್ಸಲೀಯರ ದಾಳಿಯನ್ನು ಪ್ರತಿಭಟಿಸಿ ಶನಿವಾರ ಸಂಪೂರ್ಣ ಬಂದ್ ಆಚರಿಸಲಾಗಿದೆ. ನಕ್ಸಲೀಯರನ್ನು ಗುಡಿಸಿ ಹಾಕುವ ಕಾರ್ಯಾಚರಣೆಯಲ್ಲಿ ಆಂಧ್ರಪ್ರದೇಶದ ಕಮಾಂಡೊ ಪಡೆ ಗ್ರೇಹೌಂಡ್ಸ್ ಕೂಡ ಸೇರಿಕೊಂಡಿದೆ. ತೊಂಗಡು ಬಳಿ ಪೊಲೀಸ್ ತಂಡದ ಮೇಲೆ ದಾಳಿ ಮಾಡಿದ ನಕ್ಸಲೀಯರು 16 ಮಂದಿಯನ್ನು ಶುಕ್ರವಾರ ಹತ್ಯೆ ಮಾಡಿದ್ದರು.

ಆಂಧ್ರಪ್ರದೇಶದ ಅಂತಾರಾಜ್ಯ ಗಡಿ ಬಳಿಯ ತೊಂಗುಡಾ ಗ್ರಾಮದ ಬಳಿ ಮಾವೋವಾದಿ ಉಗ್ರರು 21 ಪೊಲೀಸರ ಮೇಲೆ ದಾಳಿ ಮಾಡಿದಾಗ, ಅವರಲ್ಲಿ ಐವರು ಗಾಯಗಳೊಂದಿಗೆ ಪಾರಾಗಿದ್ದು, 16 ಪೊಲೀಸರು ಮೃತಪಟ್ಟಿದ್ದರು.

ಅಂತಾರಾಜ್ಯ ಗಡಿಯಲ್ಲಿರುವ ಈ ಪ್ರದೇಶಕ್ಕೆ ಕೊಂಟಾ ಮತ್ತು ಬಿಜಾಪುರದ ಭದ್ರತಾ ಸಿಬ್ಬಂದಿಯನ್ನು ವಿಮಾನದ ಮೂಲಕ ಇಳಿಸಲಾಗಿದ್ದು, ಆಂಧ್ರಪ್ರದೇಶದ ಉನ್ನತ ಕಮಾಂಡೊ ಪಡೆ ಕೂಡ ಪ್ರದೇಶವನ್ನು ಮುಟ್ಟಿದೆ.

ಏತನ್ಮಧ್ಯೆ, ನಕ್ಸಲೀಯರ ದಾಳಿಯ ವಿರುದ್ಧ ಪ್ರತಿಭಟನೆ ಸಂಕೇತವಾಗಿ ಬಿಜಾಪುರದಲ್ಲಿ ಸಂಪೂರ್ಣ ಬಂದ್ ಆಚರಿಸಲಾಗಿದೆ, ರಾಜ್ಯ ಸಂಸ್ಥಾಪನಾ ದಿನಕ್ಕೆ ಸಂಬಂಧಪಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದು ಮಾಡುವಂತೆ ಪ್ರತಿಪಕ್ಷದ ಕಾಂಗ್ರೆಸ್ ಮುಖಂಡರು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಮತ್ತಷ್ಟು
ಪ್ರಥಮ ಮಹಿಳಾ ಉಗ್ರಗಾಮಿ ಜಾಮೀನು ವಜಾ
ಎಲ್‌ಟಿಟಿಇ ಮಾಜಿ ನಾಯಕ 'ಕರ್ನಲ್' ಕರುಣಾ ಬಂಧನ
ಕೇಂದ್ರದಿಂದ 8000 ಕೋಟಿ ರೂ.ಪ್ಯಾಕೇಜ್
ಭ್ರಷ್ಟಾಚಾರ:ಪರಿಶೀಲನೆಗೆ ಸೋನಿಯಾ ಒತ್ತಾಯ
ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಹೀನ ವರ್ತನೆ
ಪತ್ರಕರ್ತರ ಮೇಲೆ ಹಲ್ಲೆ:ಬಿಹಾರ್ ಬಂದ್