ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಪಾಕ್‌ಗೆ ಹಿಂತುರಿಗದ ಹಠವಾದಿ ಮಹಿಳೆ
ಮೂರು ತಿಂಗಳ ಕಾಲದ ವೀಸಾ ಆಧಾರದ ಮೇಲೆ ತಮ್ಮ ಪತ್ನಿಯ ಜತೆ ಇರಲು ಪಾಕಿಸ್ತಾನದಿಂದ ಜಮ್ಮುಕಾಶ್ಮೀರಕ್ಕೆ ಆಗಮಿಸಿರುವ ಮಹಿಳೆ ಶಬನಂ ಕೌಸರ್ ತಾನು ಪಾಕಿಸ್ತಾನಕ್ಕೆ ಹಿಂತಿರುಗಿ ಹೋಗುವುದಿಲ್ಲವೆಂದು ಹಠ ಹಿಡಿದಿದ್ದಾರೆ. ತನಗೆ ಪಾಕಿಸ್ತಾನಕ್ಕೆ ಹಿಂತಿರುಗುವಂತೆ ಬೆದರಿಕೆ ಹಾಕಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

ಸಜ್ಜದ್ ಅವರು ಪಾಕಿಸ್ತಾನದ ಗುಜ್ರನ್‌ವಾಲಾಗೆ ಭೇಟಿ ನೀಡಿದ್ದಾಗ ಶಬನಮ್ ಅವರನ್ನು ಪ್ರೇಮಿಸಿ ವಿವಾಹವಾಗಿದ್ದು, ಭಾರತದ ಪೌರತ್ವಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಗಡಿ ಜಿಲ್ಲೆ ಬುಡಾಲ್‌ಗೆ ಹಿಂತಿರುಗಿದ ಸಜ್ಜದ್ ತನ್ನ ಪತ್ನಿಯನ್ನು ಕರೆತರಲು ಸಾಧ್ಯವಾಗಲಿಲ್ಲ.

ದೀರ್ಘ ಹೋರಾಟದ ಬಳಿಕ ತಮ್ಮ ಪತಿಯನ್ನು ಭೇಟಿ ಮಾಡುವ ಸಲವಾಗಿ ಭಾರತೀಯ ವೀಸಾ ಪಡೆಯಲು ಸಾಧ್ಯವಾಯಿತು. ಶಬನಮ್ ಈಗ ಪಾಕಿಸ್ತಾನದಲ್ಲಿ ಹುಟ್ಟಿರುವ ತನ್ನ ಮಗುವಿನ ಜತೆ ಕಾಯಮ್ಮಾಗಿ ಪತಿಯ ಜತೆ ಉಳಿಯಲು ಬಯಸಿದ್ದಾರೆ.

ಸರ್ಕಾರ ಈ ವಿಷಯದ ಕಾನೂನುಬದ್ಧತೆ ಪರಿಶೀಲನೆ ಮಾಡುವುದಾಗಿ ರಾಜ್ಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮತ್ತಷ್ಟು
ಗುಜರಾತ್ ಬಗ್ಗೆ ಸೋನಿಯಾ ಕನಿಕರ
ನಕ್ಸಲೀಯರ ದಾಳಿ ಪ್ರತಿಭಟಿಸಿ ಬಂದ್
ಪ್ರಥಮ ಮಹಿಳಾ ಉಗ್ರಗಾಮಿ ಜಾಮೀನು ವಜಾ
ಕಾಲ್ ಸೆಂಟರ್ ಯುವತಿ ಮೇಲೆ ಅತ್ಯಾಚಾರ, ಹತ್ಯೆ
ಕೇಂದ್ರದಿಂದ 8000 ಕೋಟಿ ರೂ.ಪ್ಯಾಕೇಜ್
ಭ್ರಷ್ಟಾಚಾರ:ಪರಿಶೀಲನೆಗೆ ಸೋನಿಯಾ ಒತ್ತಾಯ