ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಕರುಣಾನಿಧಿ: ಮುಂಬೈ ಕೋರ್ಟ್‌‌ನಿಂದ ಸಮನ್ಸ್ ಜಾರಿ
ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ತಮಿಳುನಾಡು ಮುಖ್ಯಮಂತ್ರಿ ಕೆ.ಕರುಣಾನಿಧಿ ವಿರುದ್ಧ ವಿಶ್ವಹಿಂದೂ ಪರಿಷತ್ ಸಲ್ಲಿಸಿದ್ದ ದೂರಿನ್ವಯ ಮುಂಬೈ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಬೊರಿವಿಲಿಯ 26ನೇ ಮೆಟ್ರೋಪಾಲಿಟನ್ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎ.ಜಿ.ಮೊಹಾಬೆ ಅವರು ಮನವಿಯ ವಿಚಾರಣೆ ನಡೆಸಿ,ಡಿಸೆಂಬರ್ 11ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ.
ರಾಮನ ಕುರಿತು ಅವಹೇಳನದ ಹೇಳಿಕೆ ನೀಡಿದ ಡಿಎಂಕೆ ವರಿಷ್ಠ ಕರುಣಾನಿಧಿಯವರ ವಿರುದ್ದ ಮುಂಬೈ ವಿಶ್ವಹಿಂದೂ ಪರಿಷತ್ ಘಟಕದ ಪ್ರಧಾನ ಕಾರ್ಯದರ್ಶಿ ಅರುಣ್ ಹಾಂಡ ಅವರು ದೂರು ಸಲ್ಲಿಸಿದ್ದರು.

ಭಾರತೀಯ ದಂಡ ಸಂಹಿತೆ(ಐಪಿಸಿ)153ರನ್ವಯ ಹಾಗೂ 295(ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗೆ ಧಕ್ಕೆ)ಕಲಂನಂತೆ ದೂರು ದಾಖಲಿಸಿರುವುದಾಗಿ ಹಾಂಡಾ ಅವರ ವಕೀಲ ಜ್ಞಾನಮೂರ್ತಿ ಶರ್ಮಾ ತಿಳಿಸಿದ್ದಾರೆ.
ಮತ್ತಷ್ಟು
ಪಾಕ್‌ನಲ್ಲಿ ದೋಗಾರ್ ಮುಖ್ಯ ನ್ಯಾಯಾಧೀಶ
ಪಾಕ್‌ಗೆ ಹಿಂತುರಿಗದ ಹಠವಾದಿ ಮಹಿಳೆ
ಗುಜರಾತ್ ಬಗ್ಗೆ ಸೋನಿಯಾ ಕನಿಕರ
ನಕ್ಸಲೀಯರ ದಾಳಿ ಪ್ರತಿಭಟಿಸಿ ಬಂದ್
ಪ್ರಥಮ ಮಹಿಳಾ ಉಗ್ರಗಾಮಿ ಜಾಮೀನು ವಜಾ
ಕಾಲ್ ಸೆಂಟರ್ ಯುವತಿ ಮೇಲೆ ಅತ್ಯಾಚಾರ, ಹತ್ಯೆ