ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಪಾಕಿಸ್ತಾನದಲ್ಲಿ ತುರ್ತುಪರಿಸ್ಥಿತಿ ಗಡಿಯಲ್ಲಿ ಕಟ್ಟೆಚ್ಚರ
ಪಾಕಿಸ್ತಾನದಲ್ಲಿ ತುರ್ತುಪರಿಸ್ಥಿತಿ ಜಾರಿಯಾಗುತ್ತಿದ್ದಂತೆ. ಭಾರತ, ಪಾಕಿಸ್ತಾನಕ್ಕೆ ಹೊಂದಿಕೊಂಡಂತೆ ಇರುವ ಗಡಿ ಪಹರೆಯನ್ನು ಚುರುಕುಗೊಳಿಸಿದೆ.

ಪಾಕಿಸ್ತಾನಕ್ಕೆ ಹೊಂದಿಕೊಂಡಂತೆ ಇರುವ ರಾಜ್ಯಗಳಾದ ಗುಜರಾತ್, ರಾಜಸ್ತಾನ್, ಪಂಜಾಬ್ ಮತ್ತು ಜಮ್ಮುಕಾಶ್ಮೀರ ರಾಜ್ಯಗಳ ಮೂಲಕ ಆತಂಕವಾದಿ ಶಕ್ತಿಗಳು ದೇಶಕ್ಕೆ ನುಸುಳುವ ಸಾಧ್ಯತೆ ಇದ್ದು, ಆದ್ದರಿಂದ 75 ಕಿ ಮಿ ಉದ್ದಕ್ಕೂ ಗಡಿ ಭದ್ರತಾ ಪಡೆಯು ಗಡಿ ಕಾವಲನ್ನು ಬಿಗಿಗೊಳಿಸಲಿದೆ. ಈ ಕುರಿತು ಕೇಂದ್ರ ಗೃಹ ಸಚಿವಾಲಯವು ಪ್ಯಾರಾ ಮಿಲಿಟರಿ ಪಡೆಗೆ ಸೂಚನೆ ನೀಡಿದೆ.

ಪಶ್ಚಿಮದ ಗಡಿಯಲ್ಲಿ ಇರುವ ಪ್ಯಾರಾಮಿಲಿಟರಿ ಸಿಬ್ಬಂದಿಗೆ ಮತ್ತು ಅಧಿಕಾರಿಗಳಿಗೆ ಗಡಿ ಕಾವಲು ಬಿಗಿಗೊಳಿಸುವಂತೆ ಸೂಚನೆ ನೀಡಿದ್ದೆವೆ ಎಂದು ಬಿಎಸ್ಎಫ್ ಜನರಲ್ ಎ.ಕೆ ಮಿತ್ರಾ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದಲ್ಲಿನ ಆಗಿರುವ ಬೆಳವಣಿಗೆಗಳಿಂದ ಇಸ್ಲಾಮಿಕ್ ಶಕ್ತಿಗಳು ಭಾರತಕ್ಕೆ ನುಸುಳುವ ಸಾಧ್ಯತೆ ಇರುವುದನ್ನು ತಳ್ಳಿಹಾಕುವಂತಿಲ್ಲ.

ಇಂಡೊ-ಪಾಕ್ ಗಡಿಯುದ್ದಕ್ಕೂ ಹೆಚ್ಚಿನ ಪಡೆಯನ್ನು ನಿಯುಕ್ತಿಗೊಳಿಸುವುದನ್ನು ತಳ್ಳಿಹಾಕಿದ ಅವರು, ನಿಯೋಜಿಸಲಾಗಿರುವ ಮಿಲಿಟರಿ ಮತ್ತು ಅರೆಸೇನಾ ಮಿಲಿಟರಿ ಪಡೆಯು ಪರಿಸ್ಥಿತಿಯನ್ನು ನಿಭಾಯಿಸಲು ಶಕ್ತವಾಗಿದೆ. ಆದರೆ ನಾವು ಪರಿಸ್ಥಿತಿಗೆ ತಕ್ಕಂತೆ ಕ್ರಮ ತೆಗೆದುಕೊಳ್ಳುವುದಕ್ಕೆ ಹಿಂಜರಿಯುವುದಿಲ್ಲ ಎಂದವರು ಹೇಳಿದ್ದಾರೆ.

ದೇಶದಲ್ಲಿ ಭಯೋತ್ಪಾದನೆಯ ಹೆಚ್ಚಳ ಮತ್ತು ನ್ಯಾಯಾಂಗದ ನಿರಂತರ ಮಧ್ಯ ಪ್ರವೇಶದ ಕಾರಣ ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಜಾರಿಗೊಳಿಸಿ, ಮುಖ್ಯನ್ಯಾಯಾಧೀಶ ಇಪ್ತಿಕಾರ ಚೌದರಿಯವರನ್ನು ಪದಚ್ಯುತಗೊಳಿಸಿದ್ದಾರೆ.
ಮತ್ತಷ್ಟು
ನಿತಾರಿ ಪ್ರಕರಣ:ಸಿಬಿಐ ಮುಖ್ಯಸ್ಥರ ವಿರುದ್ಧ ಎಫ್‌ಐಆರ್
ಕರುಣಾನಿಧಿ: ಮುಂಬೈ ಕೋರ್ಟ್‌‌ನಿಂದ ಸಮನ್ಸ್ ಜಾರಿ
ಪಾಕ್‌ನಲ್ಲಿ ದೋಗಾರ್ ಮುಖ್ಯ ನ್ಯಾಯಾಧೀಶ
ಪಾಕ್‌ಗೆ ಹಿಂತುರಿಗದ ಹಠವಾದಿ ಮಹಿಳೆ
ಗುಜರಾತ್ ಬಗ್ಗೆ ಸೋನಿಯಾ ಕನಿಕರ
ನಕ್ಸಲೀಯರ ದಾಳಿ ಪ್ರತಿಭಟಿಸಿ ಬಂದ್