ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸಂಸತ್ ಎದುರು ಬತ್ತ ಸುರಿಯುವ ಪ್ರತಿಭಟನೆ
ತಮಿಳುನಾಡಿನ ಸಾವಿರಾರು ರೈತರು ನವದೆಹಲಿಗೆ ಯಾತ್ರೆ ಹೊರಟು ಸಂಸತ್ ಭವನದ ಎದುರು ತಾವು ಬೆಳೆದಿರುವ ಬತ್ತವನ್ನು ಸುರಿಯುವ ವಿನೂತನ ರೀತಿಯ ಪ್ರತಿಭಟನೆಯನ್ನು ಆಯೋಜಿಸಲು ನಿರ್ಧರಿಸಿದ್ದಾರೆ. ಪ್ರತಿ ಕ್ವಿಂಟಲ್ ಬತ್ತಕ್ಕೆ 1500 ರೂ. ಖರೀದಿ ಬೆಲೆ ನಿಗದಿ ಮಾಡುವಂತೆ ಕೇಂದ್ರ ಸರ್ಕಾರದ ಗಮನಸೆಳೆಯುವುದು ಇವರ ಉದ್ದೇಶವಾಗಿದೆ.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಎಲ್ಲ ರೈತ ಸಂಘಗಳ ಒಕ್ಕೂಟದ ಸಭೆಯಲ್ಲಿ ಇದಕ್ಕೆ ಸಂಬಂಧಪಟ್ಟ ನಿರ್ಧಾರವನ್ನು ಅನುಮೋದಿಸಲಾಗಿದೆ ಎಂದು ತಮಿಳುನಾಡು ತೋಟಗಾರಿಕೆ ಬೆಳೆಗಾರರ ಸಂಘಟನೆ ಅಧ್ಯಕ್ಷ ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೇಂದ್ರಸರ್ಕಾರವು ಗೋಧಿಗೆ ಪ್ರತಿ ಕ್ವಿಂಟಲ್‌ಗೆ 1000 ರೂ. ಖರೀದಿ ದರ ನಿಗದಿ ಮಾಡಿದ್ದರೆ ಬತ್ತಕ್ಕೆ 725 ರೂ. ದರ ನಿಗದಿಮಾಡಿರುವುದು ಖಂಡನೀಯ ಎಂದು ಅವರು ಹೇಳಿದರು.

ತಮಿಳುನಾಡು ರೈತರ ಬೇಡಿಕೆಗಳನ್ನು ಈಡೇರಿಸಲು ಯತ್ನಿಸುವಂತೆ ಅವರು ತಮಿಳುನಾಡು ಲೋಕಸಭೆ, ರಾಜ್ಯಸಭೆ ಸದಸ್ಯರು ಮತ್ತು ಕೇಂದ್ರ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ.
ಮತ್ತಷ್ಟು
ಪಾಕಿಸ್ತಾನದಲ್ಲಿ ತುರ್ತುಪರಿಸ್ಥಿತಿ ಗಡಿಯಲ್ಲಿ ಕಟ್ಟೆಚ್ಚರ
ನಿತಾರಿ ಪ್ರಕರಣ:ಸಿಬಿಐ ಮುಖ್ಯಸ್ಥರ ವಿರುದ್ಧ ಎಫ್‌ಐಆರ್
ಕರುಣಾನಿಧಿ: ಮುಂಬೈ ಕೋರ್ಟ್‌‌ನಿಂದ ಸಮನ್ಸ್ ಜಾರಿ
ಪಾಕ್‌ನಲ್ಲಿ ದೋಗಾರ್ ಮುಖ್ಯ ನ್ಯಾಯಾಧೀಶ
ಪಾಕ್‌ಗೆ ಹಿಂತುರಿಗದ ಹಠವಾದಿ ಮಹಿಳೆ
ಗುಜರಾತ್ ಬಗ್ಗೆ ಸೋನಿಯಾ ಕನಿಕರ