ನಂದಿಗ್ರಾಮದಲ್ಲಿ ಸಂಭವಿಸಿದ ಹಿಂಸಾಚಾರದ ಬಗ್ಗೆ ಪ್ರಧಾನಮಂತ್ರಿ ಮನಮೋಹನ ಸಿಂಗ್ ತೀವ್ರ ಕಳವಳ ವ್ಯಕ್ತಪಡಿಸಿ, ಆ ಘಟನೆಯ ಬಗ್ಗೆ ಪರಿಶೀಲನೆ ನಡೆಸುವಂತೆ ಗೃಹಸಚಿವ ಶಿವರಾಜ ಪಾಟೀಲ್ ಅವರಿಗೆ ಸೂಚಿಸಿರುವುದಾಗಿ ಡೆಮಾಕ್ರಟಿಕ್ ಸೋಷಿಯಲಿಸಂ ಪಕ್ಷದ(ಪಿಡಿಎಸ್) ಅಧ್ಯಕ್ಷ ಸೈಫುದ್ದೀನ್ ಚೌಧರಿ ಅವರಿಗೆ ಬರೆದಿರುವ ಉತ್ತರದಲ್ಲಿ ತಿಳಿಸಿದ್ದಾರೆ.
ಸಿಪಿಎಂ ಭದ್ರಕೋಟೆಯಾದ ಕೆಜುರಿಯಲ್ಲಿ ನಂದಿಗ್ರಾಮದ ಜನರ ಮೇಲೆ ನಡೆದ ದಾಳಿಗಳನ್ನು ಕುರಿತು ಪಿಡಿಎಸ್ ಮುಖ್ಯಸ್ಥನ ಪತ್ರಕ್ಕೆ ಉತ್ತರಿಸಿರುವ ಸಿಂಗ್ ನಂದಿ ಗ್ರಾಮದ ಹಿಂಸಾಚಾರ ಬಗ್ಗೆ ತುರ್ತಾಗಿ ಗಮನಹರಿಸುವಂತೆ ತಾವು ಗೃಹಸಚಿವರಿಗೆ ಸೂಚಿಸಿರುವುದಾಗಿ ಹೇಳಿದರು.
ಆದರೆ ಪಶ್ಚಿಮ ಬಂಗಾಳ ಕೋರಿರುವಂತೆ ಪ್ರಕ್ಷುಬ್ಧಪೀಡಿತ ಪ್ರದೇಶದಲ್ಲಿ ಶಾಂತಿ ಮೂಡಿಸಲು ಸಿಆರ್‌ಪಿಎಫ್ ಪಡೆಯನ್ನು ನಿಯೋಜಿಸುವ ಬಗ್ಗೆ ಸಿಂಗ್ ಯಾವ ಪ್ರಸ್ತಾಪವನ್ನೂ ಮಾಡಲಿಲ್ಲ.
ನಂದಿಗ್ರಾಮದಲ್ಲಿ ಕಳೆದ ಜನವರಿಯಿಂದ ಘರ್ಷಣೆಗಳು ಮರುಕಳಿಸುತ್ತಿದ್ದು, ಪೊಲೀಸ್ ಗೋಲಿಬಾರ್‌ಗೆ 14 ಮಂದಿಯ ಸಾವು ಸೇರಿದಂತೆ ಅನೇಕ ಮಂದಿ ಮೃತಪಟ್ಟಿದ್ದಾರೆ.
|