ಗೋಧ್ರಾ ದುರಂತದ ಬಳಿಕ ಸಂಭವಿಸಿದ ಗಲಭೆಗಳನ್ನು ಕುರಿತು ತೆಹಲ್ಕಾ ಕುಟುಕು ಕಾರ್ಯಾಚರಣೆಯಲ್ಲಿ ಮಾಡಿರುವ ಆರೋಪಗಳಿಗೆ ಸಂಬಂಧಪಟ್ಟಂತೆ ಸಿಬಿಐ ತನಿಖೆಗೆ ಶಿಫಾರಸು ಮಾಡಲು ರಾಷ್ಟ್ರೀಯ ಮಾನವಹಕ್ಕುಗಳ ರಕ್ಷಣೆ ಆಯೋಗ ಸೋಮವಾರ ನಿರ್ಧರಿಸಿದೆ.
ಇದರಿಂದಾಗಿ ನರೇಂದ್ರ ಮೋದಿ ಸರ್ಕಾರಕ್ಕೆ ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತೀವ್ರ ಹಿನ್ನಡೆ ಉಂಟಾಗಿದೆ.ಗುಜರಾತಿನಲ್ಲಿ ಸ್ಫೋಟಿಸಿದ ಕೋಮುಹಿಂಸಾಚಾರದ ಬಗ್ಗೆ ತೆಹಲ್ಕಾ "ಆಪರೇಷನ್ ಕಳಂಕ್"ನಲ್ಲಿ ಮಾಡಿರುವ ಆರೋಪಗಳನ್ನು ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ಆದೇಶ ನೀಡಲು ಆಯೋಗ ನಿರ್ಧರಿಸಿತು ಎಂದು ಎನ್‌ಎಚ್‌ಆರ್‌ಸಿ ಹೇಳಿಕೆ ತಿಳಿಸಿದೆ..
.ಆಜ್ ತಕ್ ಚಾನೆಲ್ ಪ್ರಸಾರ ಮಾಡಿದ ಕಾರ್ಯಕ್ರಮದ ವಿಡಿಯೋ ಚಿತ್ರಗಳನ್ನು ವೀಕ್ಷಿಸಿದ ಆಯೋಗವು ಸ್ವತಂತ್ರ ತನಿಖಾ ದಳದಿಂದ ತನಿಖೆ ನಡೆಸಲು ಸೂಕ್ತವಾದ ಪ್ರಕರಣ ಎಂದು ಅಭಿಪ್ರಾಯಪಟ್ಟಿತು.
ವಿಡಿಯೋ ಚಿತ್ರದ ಸತ್ಯಾಸತ್ಯತೆ ಕುರಿತ ಸಿಬಿಐ ತನಿಖೆಗೆ ಒಪ್ಪಿಗೆ ನೀಡುವಂತೆ ಕೂಡ ಆಯೋಗ ರಾಜ್ಯ ಸರ್ಕಾರಕ್ಕೆ ಆದೇಶನೀಡಿದೆ.
|