ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಗುಜರಾತ್: ಕಾಂಗ್ರೆಸ್‌ನ ಚಕ್ ದೆ ಮ್ಯಾಜಿಕ್
ನರೇಂದ್ರ ಮೋದಿ ಆಡಳಿತದ ಗುಜರಾತ್‌ನಲ್ಲಿ ಮುಂದಿನ ತಿಂಗಳು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ "ಚಕ್ ದೆ" ಮಂತ್ರ ಫಲಪ್ರದವಾಗುವುದೇ? ಬಿಜೆಪಿಯ ಹಿಂದುತ್ವದ ಪ್ರಯೋಗಾಲಯವೆಂದು ಖ್ಯಾತಿವೆತ್ತ ರಾಜ್ಯದಲ್ಲಿ ಈಗಿದು ಪ್ರಮುಖ ಚರ್ಚೆಯ ವಿಷಯವಾಗಿದೆ.

ಪ್ರಮುಖ ಪಶ್ಚಿಮ ರಾಜ್ಯವಾದ ಗುಜರಾತಿನಲ್ಲಿ ಸುಮಾರು 17 ವರ್ಷಗಳವರೆಗೆ ಅಧಿಕಾರದ ರುಚಿಯನ್ನೇ ಕಾಣದ ಕಾಂಗ್ರೆಸ್ ಶಾರುಕ್ ಖಾನ್ ಅಭಿನಯದ ಚಕ್ ದೆ ಮಂತ್ರಕ್ಕೆ ಮತಪೆಟ್ಟಿಗೆಯಲ್ಲಿ ಮರುಚೇತನ ನೀಡುವ ಆಶಯ ಹೊಂದಿದೆ.

ತನ್ನ ಸಂದೇಶವನ್ನು ಹರಡಲು ಚಕ್ ದೆ ಕಾಂಗ್ರೆಸ್ ಸ್ಟಿಕರ್‌ಗಳನ್ನು ಪ್ರತಿಪಕ್ಷ ಅವಲಂಬಿಸಿದ್ದು, ಮೋದಿ ಚುನಾವಣೆ ವಿಷಯವಾಗಿರುವ ಜೀವನ್ಮರಣ ಹೋರಾಟದಲ್ಲಿ ಕಾಂಗ್ರೆಸ್‌ಗೆ ಚಕ್ ದೆ ವಸ್ತುಶಃ ಒಂದು ಮಂತ್ರವಾಗಿ ಪರಿಣಮಿಸಿದೆ.

ಬಿಜೆಪಿಯ ಭದ್ರಕೋಟೆ ಮತ್ತು ಗೋಧ್ರಾ ಜಿಲ್ಲೆ ಕೂಡ ಇರುವ ಮಧ್ಯ ಗುಜರಾತ್ ಪ್ರದೇಶಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಎಐಸಿಸಿ ಪ್ರಧಾನಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮುಖ್ಯಮಂತ್ರಿ ತಮ್ಮ ಗರ್ವದಿಂದಾಗಿ ಚುನಾವಣೆ ವಿಷಯವಾಗಿದ್ದಾರೆ ಎಂದು ಹೇಳಿದರು. ಮೋದಿಯ ಬೆಂಬಲದ ನೆಲೆ ಮುಖ್ಯವಾಗಿ ನಗರದ ಮಧ್ಯಮ ವರ್ಗದಲ್ಲಿದೆ ಎಂದು ಅವರು ಭಾವಿಸಿದ್ದಾರೆ.
ಮತ್ತಷ್ಟು
ತೆಹಲ್ಕಾ ಆರೋಪ: ಸಿಬಿಐ ತನಿಖೆಗೆ ಆದೇಶ
ನಂದಿಗ್ರಾಮದ ಹಿಂಸಾಚಾರ:ಪ್ರಧಾನಿ ಕಳವಳ
ರಾಜ್ಯರಾಜಕಾರಣ: ರಾಜ್ಯಪಾಲರ ದೆಹಲಿ ಪಯಣ
ಸಂಸತ್ ಎದುರು ಬತ್ತ ಸುರಿಯುವ ಪ್ರತಿಭಟನೆ
ಪಾಕಿಸ್ತಾನದಲ್ಲಿ ತುರ್ತುಪರಿಸ್ಥಿತಿ ಗಡಿಯಲ್ಲಿ ಕಟ್ಟೆಚ್ಚರ
ನಿತಾರಿ ಪ್ರಕರಣ:ಸಿಬಿಐ ಮುಖ್ಯಸ್ಥರ ವಿರುದ್ಧ ಎಫ್‌ಐಆರ್