ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮಲ್ಹೋತ್ರಾಗೆ ನ.22ರವರೆಗೆ ಜಾಮೀನು
ಡಿಡಿಎ ಭೂಹಗರಣದ ಸೂತ್ರಧಾರ ಅಶೋಕ್ ಮಲ್ಹೋತ್ರಾ ಮತ್ತು ಅವರ ಸಹಚರನಿಗೆ ಸಿಬಿಐ ಕೋರ್ಟೋಂದು ಮಂಗಳವಾರ ನ.22ರವರೆಗೆ ಜಾಮೀನು ದಯಪಾಲಿಸಿದೆ. ಸಿಬಿಐ ಮಲ್ಹೋತ್ರಾ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ ಬಳಿಕ ಅವರ ಕಸ್ಟಡಿಯನ್ನು ಸಮರ್ಥಿಸಿಕೊಳ್ಳಲು ವಿಫಲವಾದ್ದರಿಂದ ಕೋರ್ಟ್‌ನಿಂದ ಜಾಮೀನು ಆದೇಶ ಹೊರಬಿದ್ದಿದೆ.

ಹಗರಣದ ಇನ್ನೂ ಐವರು ಆರೋಪಿಗಳು ಬಂಧಿತರಾಗದಿರುವಾಗ ಉಳಿದ ಇಬ್ಬರನ್ನು ಕಸ್ಟಡಿಯಲ್ಲಿ ಇಟ್ಟುಕೊಳ್ಳುವ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ಸಿಬಿಐ ವಿಫಲವಾಯಿತು.

ಕೊಳೆಗೇರಿ ನಿವಾಸಿಗಳ ಪುನರ್ವಸತಿಗೆ ಮೀಸಲಾಗಿದ್ದ ಭೂಮಿಯನ್ನು ಕಬಳಿಸಲು ಲಾಲ್ ಮಣಿ ಎಂಬವರು ಕೂಡ ಸಾವಿರಾರು ದಾಖಲೆಗಳನ್ನು ತಿದ್ದಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.ಮಲ್ಹೋತ್ರಾ ಕಳೆದ 90 ದಿನಗಳಿಂದ ಕಸ್ಟಡಿಯಲ್ಲಿದ್ದು, ಧೀರ್‌ಪುರ ಮಂಜೂರಾತಿ ಪ್ರಕರಣದಲ್ಲಿ ಸಿಬಿಐ ಸೋಮವಾರ ಆರೋಪಪಟ್ಟಿ ಸಲ್ಲಿಸಿದೆ.
ಮತ್ತಷ್ಟು
ಪಾಕ್‌ನಲ್ಲಿ ಶೀಘ್ರ ಪ್ರಜಾಪ್ರಭುತ್ವಕ್ಕೆ ಆಶಯ
ಬೋಫೋರ್ಸ್ ಪ್ರಕರಣ ಹೆಚ್ಚು ಕಠಿಣ: ಸೋಧಿ
ಗುಜರಾತ್: ಕಾಂಗ್ರೆಸ್‌ನ ಚಕ್ ದೆ ಮ್ಯಾಜಿಕ್
ತೆಹಲ್ಕಾ ಆರೋಪ: ಸಿಬಿಐ ತನಿಖೆಗೆ ಆದೇಶ
ನಂದಿಗ್ರಾಮದ ಹಿಂಸಾಚಾರ:ಪ್ರಧಾನಿ ಕಳವಳ
ರಾಜ್ಯರಾಜಕಾರಣ: ರಾಜ್ಯಪಾಲರ ದೆಹಲಿ ಪಯಣ