ಪಶ್ಚಿಮ ಬಂಗಾಲದ ನಂದಿಗ್ರಾಮದಲ್ಲಿ ಭೂಮಿ ಉಚ್ಚೇಧ್ ಪ್ರತಿರೋಧ್ ಸಮಿತಿ ಮತ್ತು ಸಿಪಿಐಎಂ ಬೆಂಬಲಿಗರ ನಡುವೆ ಮತ್ತೆ ಹಿಂಸಾಚಾರ ಹಾಗೂ ಗುಂಡಿನ ಚಕಮಕಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು,ಇತರ ಎಂಟು ಮಂದಿ ಗಾಯಗೊಂಡಿದ್ದಾರೆ.
ಗೋಕುಲ್ ನಗರ,ರಾಣಿಚಕ್,ಭಂಗಬೇರಿಯ ಮತ್ತು ಸಾತೇಂಗ್‌ಬರಿ ಪ್ರದೇಶಹಳಲ್ಲಿ ಬೆಳಿಗ್ಗೆನಿಂದಲೇ ಇತ್ತಂಡಗಳ ನಡುವೆ ಗುಂಡಿನ ಹಾರಾಟ ನಡೆಸಿದವು ಹಾಗೂ ಹಿಂಸೆ ಮುಂದುವರಿದಿತ್ತು ಎಂದು ಪಶ್ಚಿಮ ಬಂಗಾಲ ಗೃಹ ಕಾರ್ಯದರ್ಶಿ ಪಿ.ಆರ್.ರಾಯ್ ಕೋಲ್ಕತಾದಲ್ಲಿ ತಿಳಿಸಿದ್ದಾರೆ.
ಗಾಯಾಳುಗಳನ್ನು ಈಸ್ಟರ್ನ್ ಫ್ರಾಂಟಿಯರ್ ರೈಫಲ್ಸ್‌ನ ಒರ್ವ ಸಿಬ್ಬಂದಿ ಸೇರಿದ್ದಾರೆ.
ಈ ಹಿಂಸಾಚಾರದ ನಂತರ ನಂದಿಗ್ರಾಮದ ಪ್ರಕರಣ ರಾಜಕೀಯವಾಗಿ ರಣರಂಗವೆಬ್ಬಿಸಿದೆ.ಈ ಹಿಂಸಾಚಾರಕ್ಕೆ ಸಿಪಿಐಎಂ ಕಾರಣ ಎಂದು ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.ಘಟನೆಯ ಕುರಿತು ಸಿಪಿಐಎಂ ಈ ಆರೋಪವನ್ನು ಬಲವಾಗಿ ಅಲ್ಲಗಳೆದಿದೆ.
ಆದರೆ ಮಂಗಳವಾರದಂದು ಸಂಭವಿಸಿದ ಈ ಹಿಂಸಾಚಾರದಲ್ಲಿ ಸಿಪಿಐಎಂ ಪಾತ್ರ ಇರುವುದಾಗಿ ರಾಜ್ಯ ಗೃಹ ಕಾರ್ಯದರ್ಶಿಯವರು ಖಚಿತಪಡಿಸಿದ್ದಾರೆ.
ನಂದಿಗ್ರಾಮದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಬುಧವಾರದಂದು (ಇಂದು) ಪಶ್ಚಿಮಬಂಗಾಲದ ಬೀದಿ, ಬೀದಿಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ತೃಣಮೂಲ ಕಾಂಗ್ರೆಸ್ ತಿಳಿಸಿದೆ.
ನಂದಿಗ್ರಾಮದಲ್ಲಿನ ಪರಿಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಅರೆ ಸೈನಿಕ ಪಡೆಯನ್ನು ಕಳುಹಿಸುವಂತೆ ರಾಜ್ಯ ಸರಕಾರ ಮನವಿ ಮಾಡಿಕೊಂಡಿದೆ.
|