ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಇಂದು ಕಾಂಗ್ರೆಸ್ ಕಾರ್ಯಕಾರಿಣಿ ಮಂಡಳಿ ಸಭೆ
ಚಳಿಗಾಲದ ಸಂಸತ್ ಅಧಿವೇಶನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಬುಧವಾರ ಕಾಂಗ್ರೆಸ್ ಕಾರ್ಯಕಾರಿಣಿ ಮಂಡಳಿಯ ಮಹತ್ವದ ಸಭೆ ಜರುಗಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಭಾರತ-ಅಮೆರಿಕಾ ಅಣು ಒಪ್ಪಂದ, ಗುಜರಾತ್ ಚುನಾವಣೆ, ನಂದಿಗ್ರಾಮ ಹಿಂಸಾಚಾರ ಸೇರಿದಂತೆ ಹತ್ತು ಹಲವು ಜಟಿಲ ಸಮಸ್ಯೆಗಳ ಕುರಿತು, ಸಂಸತ್ ಅಧಿವೇಶನದಲ್ಲಿ ವಿರೋಧ ಪಕ್ಷಗಳು ಮಾಡುವ ದಾಳಿಯನ್ನು ತಡೆಗಟ್ಟುವ ಕುರಿತು ಇಂದಿನ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ.

ಮತ್ತು ಇದೇ ನವೆಂಬರ್ 17ರಂದು ಅಖಿಲ ಭಾರತ ಕಾಂಗ್ರೆಸ್ ಕಮೀಟಿಯ ಸಮ್ಮೇಳನ ಜರುಗಲಿರುವ ಹಿನ್ನೆಲೆಯಲ್ಲಿ, ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಸಹ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ.

ಡಿಸೆಂಬರ್ 11 ಮತ್ತು 16ರಂದು ಗುಜರಾತ್ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಯಾವ ರೀತಿ ಯಶಸ್ಸು ಗಳಿಸಬೇಕೆಂದು ಸಹ ಇಂದಿನ ಸಭೆಯಲ್ಲಿ ಮಹತ್ತರ ನಿರ್ಧಾರ ಕೈಗೊಳ್ಳಲಾಗುವುದು ಎಂದವರು ಹೇಳಿದ್ದಾರೆ.
ಮತ್ತಷ್ಟು
ನಂದಿಗ್ರಾಮ ಹಿಂಸಾಚಾರಕ್ಕೆ 2 ಬಲಿ
ದೀಪಾವಳಿಗೆ ಬಿಜೆಪಿ ಹೊಸ ಸರಕಾರ?
ರಾಷ್ಟ್ರಪತಿಯಿಂದ ಭರವಸೆ: ಯಡ್ಯೂರಪ್ಪ, ಕುಮಾರ
ನಂದಿಗ್ರಾಮದಲ್ಲಿ ಘರ್ಷಣೆ:10 ಮಂದಿಗೆ ಗಾಯ
ಮಲ್ಹೋತ್ರಾಗೆ ನ.22ರವರೆಗೆ ಜಾಮೀನು
ಪಾಕ್‌ನಲ್ಲಿ ಶೀಘ್ರ ಪ್ರಜಾಪ್ರಭುತ್ವಕ್ಕೆ ಆಶಯ