ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ದೀಪಾವಳಿ: ಸ್ಮಶಾನದಲ್ಲಿ ಮಧ್ಯರಾತ್ರಿ ಉಪಾಹಾರ!
ದೀಪಾವಳಿಗೆ ಮುನ್ನಾದಿನವಾದ "ಕಲಿ ಚತುರ್ದಶಿ"ಯಂದು ಮಧ್ಯರಾತ್ರಿ ಶವದಹನ ಕೇಂದ್ರದಲ್ಲಿ ಚಹಾ-ಕಾಫಿ ಸಹಿತ ಉಪಾಹಾರ ಕಾರ್ಯಕ್ರಮ ಏರ್ಪಡಿಸಲು ಭಾರತ ಜನ ವಿಜ್ಞಾನ ಜಾಥಾ ನಿರ್ಧರಿಸಿದೆ.

ಈ ನಿರ್ದಿಷ್ಟ ದಿನದಂದು ಜನರು ಕುರುಡು ನಂಬಿಕೆಗಳಿಗೆ ಬಲಿಯಾಗಿ ವಿಚಿತ್ರ ಆಚರಣೆಗಳ ಬಗ್ಗೆ ಜನತೆಯ ಮನೋಭಾವವನ್ನು ಬದಲಿಸುವ ನಿಟ್ಟಿನಲ್ಲಿ, ಅಂಧಶ್ರದ್ಧೆ ಹೋಗಲಾಗಿಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ.

ದುಷ್ಟಶಕ್ತಿಗಳ ನಿಯಂತ್ರಣಕ್ಕಾಗಿ ಈ ನಿರ್ದಿಷ್ಟ ದಿನದಂದು ಮಧ್ಯರಾತ್ರಿ ಕಳೆದ ಬಳಿಕ ಸ್ಮಶಾನದಲ್ಲಿ ಮಂತ್ರವಾದಿಗಳ ಮೂಲಕ ಯಜ್ಞ ಮತ್ತು ಇತರ ವಿಧಿಗಳನ್ನು ಇಲ್ಲಿನ ಜನತೆ ನೆರವೇರಿಸುವ ಪದ್ಧತಿ ಇದೆ.

ಈ ಕುರಿತು ಜನ ಜಾಗೃತಿ ನಡೆಸುವ ನಿಟ್ಟಿನಲ್ಲಿ ರಾಜ್ಯಮಟ್ಟದ ಈ ಕಾರ್ಯಕ್ರಮವು ಪೋರಬಂದರ್ ಸ್ಮಶಾನದಲ್ಲಿ ಗುರುವಾರ ನಡೆಯಲಿದೆ.

ಸಮಾಜದ ಭೀತಿ ನಿವಾರಿಸುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶ ಎಂದು ಭಾರತ ಜನವಿಜ್ಞಾನ ಜಾಥಾದ ಡಾ.ಜಯಂತ್ ಪಾಂಡ್ಯ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ರೀತಿಯ ಬಾಪುಗಳು, ಮೌಲ್ವಿಗಳು, ಮಾಂತ್ರಿಕರು ಸೇರಿಕೊಂಡು ಜನತೆಯ ದಾರಿ ತಪ್ಪಿಸುತ್ತಿದ್ದಾರೆ. ಈ ಮೂಲಕ ಜನರನ್ನು ಮಾನಸಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ಸುಲಿಯುತ್ತಾರೆ. ಇದನ್ನು ತಪ್ಪಿಸುವುದೇ ನಮ್ಮ ಉದ್ದೇಶ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮತ್ತಷ್ಟು
ಈ ಪುಟಾಣಿ ಬಳಿ 40000 ಅಪರೂಪದ ನಾಣ್ಯಗಳು
ಇಂದು ಕಾಂಗ್ರೆಸ್ ಕಾರ್ಯಕಾರಿಣಿ ಮಂಡಳಿ ಸಭೆ
ನಂದಿಗ್ರಾಮ ಹಿಂಸಾಚಾರಕ್ಕೆ 2 ಬಲಿ
ದೀಪಾವಳಿಗೆ ಬಿಜೆಪಿ ಹೊಸ ಸರಕಾರ?
ರಾಷ್ಟ್ರಪತಿಯಿಂದ ಭರವಸೆ: ಯಡ್ಯೂರಪ್ಪ, ಕುಮಾರ
ನಂದಿಗ್ರಾಮದಲ್ಲಿ ಘರ್ಷಣೆ:10 ಮಂದಿಗೆ ಗಾಯ