ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮಾನವನಿರ್ಮಿತ ಅನಾಹುತ ನಿಯಂತ್ರಣಕ್ಕೆ ಸಹಕಾರ: ಪ್ರಧಾನಿ ಮನವಿ
PTI
ಭಯೋತ್ಪಾದಕ ದಾಳಿ, ಕೈಗಾರಿಕಾ ಅಪಘಾತಗಳು ಮುಂತಾದ ಮಾನವ ನಿರ್ಮಿತ ಗಂಡಾಂತರಗಳು ಹೆಚ್ಚುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ಮನಮೋಹನ್ ಸಿಂಗ್, ಸುಧಾರಿತ ತಂತ್ರಜ್ಞಾನಗಳು, ವಿಮೆ ಮತ್ತು ಶಮನಕಾರಕ ಕ್ರಮಗಳಿಂದ ಇದರಿಂದಾಗುವ ಅನಾಹುತ ತಗ್ಗಿಸಲು ಸಹಕಾರ ನೀಡುವಂತೆ ಏಷ್ಯಾದ ರಾಷ್ಟ್ರಗಳನ್ನು ಕೋರಿಕೊಂಡರು.

ಅನಾಹುತದ ಅಪಾಯ ನಿಯಂತ್ರಣ ಕುರಿತು ನವದೆಹಲಿಯಲ್ಲಿ ಬುಧವಾರ ನಡೆದ ಆಸಿಯಾನ್ ರಾಷ್ಟ್ರಗಳ ಸಚಿವರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಈ ಪ್ರದೇಶದಲ್ಲಿ ಭಯೋತ್ಪಾದನೆಯ ಆತಂಕ ತೀವ್ರವಾಗಿ ಕಾಡುತ್ತಿದೆ. ಈ ಪಿಡುಗು ಗಡಿಯಾಚೆಗೂ ಹರಡಬಹುದಾಗಿದ್ದು, ಈ ಮಾನವ-ನಿರ್ಮಿತ ಪಿಡುಗುಗಳ ನಿವಾರಣೆಗೆ ಕೈಜೋಡಿಸುವಂತೆ ರಾಷ್ಟ್ರಗಳಿಗೆ ಮನವಿ ಮಾಡಿಕೊಂಡರು.

ನೈಸರ್ಗಿಕ ಮತ್ತು ಮಾನವ ನಿರ್ಮಿತ ಅನಾಹುತಗಳಿಂದಾಗುವ ಹಾನಿ ತಗ್ಗಿಸುವ ನಿಟ್ಟಿನಲ್ಲಿ ಕ್ರಿಯಾತ್ಮಕವಾದ ಮತ್ತು ನಿರ್ದಿಷ್ಟ ಉದ್ದೇಶಿತ ಕಾರ್ಯದ ಅವಶ್ಯಕತೆಯಿದೆ ಎಂದು ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟರು.

ಎಚ್ಐವಿ/ಏಡ್ಸ್ ಮತ್ತು ಹಕ್ಕಿ ಜ್ವರಗಳೇ ಮುಂತಾದ ಹೊಸ ಮಾದರಿಯ ಆರೋಗ್ಯ ಸಂಬಂಧಿತ ಅನಾಹುತಗಳಿಂದಾಗಿ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳು ಅತ್ಯಧಿಕ ಎಂಬುದರ ಬಗ್ಗೆ ಗಮನ ಸೆಳೆದ ಪ್ರಧಾನಿ, ಇವುಗಳನ್ನು ಆಧುನಿಕ ತಂತ್ರಜ್ಞಾನಗಳಿಂದ ಮಟ್ಟ ಹಾಕಬೇಕಿದೆ ಎಂದರಲ್ಲದೆ, ಅತ್ಯಂತ ದೊಡ್ಡ ಅನಾಹುತವಾದ ಜಾಗತಿಕ ತಾಪಮಾನ ಏರಿಕೆ ಮತ್ತು ವಾತಾವರಣ ಬದಲಾವಣೆಯ ನಿಯಂತ್ರಣಕ್ಕೆ ಮತ್ತಷ್ಟು ಹೆಚ್ಚಿನ ಸಹಕಾರ ಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತನಾಡಿ, ಅನಾಹುತ ನಿರ್ವಹಣೆಯನ್ನು ಅಭಿವೃದ್ಧಿ ಪ್ರಕ್ರಿಯೆಯ ಅವಿಚ್ಛಿನ್ನ ಭಾಗವಾಗಿಸಬೇಕೆಂದು ಕರೆ ನೀಡಿದರಲ್ಲದೆ, ಗಂಡಾಂತರ ನಿರ್ವಹಣೆ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಮತ್ತಷ್ಟು
ದೀಪಾವಳಿ: ಸ್ಮಶಾನದಲ್ಲಿ ಮಧ್ಯರಾತ್ರಿ ಉಪಾಹಾರ!
ಈ ಪುಟಾಣಿ ಬಳಿ 40000 ಅಪರೂಪದ ನಾಣ್ಯಗಳು
ಇಂದು ಕಾಂಗ್ರೆಸ್ ಕಾರ್ಯಕಾರಿಣಿ ಮಂಡಳಿ ಸಭೆ
ನಂದಿಗ್ರಾಮ ಹಿಂಸಾಚಾರಕ್ಕೆ 2 ಬಲಿ
ದೀಪಾವಳಿಗೆ ಬಿಜೆಪಿ ಹೊಸ ಸರಕಾರ?
ರಾಷ್ಟ್ರಪತಿಯಿಂದ ಭರವಸೆ: ಯಡ್ಯೂರಪ್ಪ, ಕುಮಾರ