ರಷ್ಯಾದ ಮಾರ್ಕ್ ಲೆನಿನ್‌ರನ್ನು ಒಸಮಾ ಬಿನ್ ಲಾಡೆನ್ ಅವರನ್ನು ಹೋಲಿಸಿದ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಒಬ್ಬ ಮೂರ್ಖ ವ್ಯಕ್ತಿ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಕಿಡಿ ಕಾರಿದ್ದಾರೆ.
1917ರ ಅಕ್ಟೋಬರ್ ತಿಂಗಳಲ್ಲಿ ಕ್ರಾಂತಿ ನಡೆದು 90 ವರ್ಷಗಳು ಸಂದ ಹಿನ್ನೆಲೆಯಲ್ಲಿ, ರಷ್ಯಾದ 90 ನೇಯ ವಾರ್ಷಿಕೋತ್ಸವ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಸಮಾರಂಭದಲ್ಲಿ ಕಾರಟ್ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅವರು ಕೆಲ ದಿನಗಳ ಹಿಂದೆ ಲೆನಿನ್, ಹಿಟ್ಲರ್ ಮತ್ತು ಒಸಮಾ ಬಿನ್ ಲಾಡೆನ್ ಅವರುಗಳಲ್ಲಿ ಪರಸ್ಪರ ಹೋಲಿಕೆ ಇದೆ ಎಂದು ಟೀಕಿಸಿರುವುದು ಬುಷ್ ಅವರ ಮೂರ್ಖತನಕ್ಕೆ ಸಾಕ್ಷಿಯಾಗಿದೆ ಎಂದರು.
ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅವರಿಗೆ ಇತಿಹಾಸದ ಜ್ಞಾನ ಕಡಿಮೆ ಇದೆ ಎಂದು ಜಗತ್ತಿಗೆ ಗೊತ್ತಿತ್ತು. ಅವರೊಬ್ಬ ಮೂರ್ಖ ಕೂಡಾ ಹೌದು ಎಂದು ಸಾಬೀತಾಗಿದೆ ಎಂದು ಟೀಕಿಸಿದ್ದಾರೆ.
ಜಗತ್ತಿನ ಸಾಮ್ರಾಜ್ಯಶಾಹಿಯನ್ನು ಕಿತ್ತೊಗೆಯುವಂತೆ ಪಕ್ಷದ ಕಾರ್ಯಕರ್ತರಿಗೆ ಕಾರಟ್ ಕರೆ ನೀಡಿದರು.
|